ಬಾಲಿವುಡ್ ಗೂ ಸ್ಯಾಂಡಲ್ವುಡ್ ಗೂ ಇರುವ ನಂಟೇನು..? ದೊಡ್ಡ ಬಾಂಬ್ ಸಿಡಿಸಿದ ಸಂಬರಗಿ..!

ಬೆಂಗಳೂರು: ಪ್ರಶಾಂತ್ ಸಂಬರಗಿ ಇಂದು ನಡೆದ ಪ್ರೆಸ್ಸ್ ಮೀಟ್ ನಲ್ಲಿ ಮಾತನಾಡಿ ಡ್ರಗ್ಸ್ ಮಾಫಿಯಾ ಬಾಲಿವುಡ್ ಗೆ ಹೇಗೆ ನಂಟಾಗಿದೆ ಕರ್ನಾಟಕ ಚಿತ್ರರಂಗ ಹೇಗೆ ಬಾಲಿವುಡ್ ಗೆ ಸಂಬಂಧ ಹೊಂದಿದೆಯಾ ಅಂತಾ ತನಿಖೆ ಆಗಬೇಕು,ಜೊತೆಗೆ ಇಂಪ್ತಿಯಾಸ್ ಖಾತ್ರಿ ಯಾರೆಂಬುದನ್ನು ತಿಳಿದುಕೊಳ್ಳಬೇಕು ಇಂಪ್ರಿಯಾಸ್ ಖಾತ್ರಿ , ಸಲ್ಮಾನ್ ಖಾನ್ ಹಾಗೂ ಸುಶ್ಮಿತಾ ದೇವ್ ಗೂ ಇರುವ ನಂಟು ಏನೆಂಬುದನ್ನು ತಿಳಿಯಬೇಕು ಎಂದು ಹೇಳಿದ್ದಾರೆ. ಸುಮಾರು ಕಳೆದ ಮೂರು ವರ್ಷ ಅಂದ್ರೆ 2017ರಲ್ಲಿ ಮುಂಬೈನಲ್ಲಿ ಒಂದು ಬರ್ತಡೆ ಪಾರ್ಟಿ ಆಗುತ್ತೆ ಆ ಪಾರ್ಟಿಗೆ ಕರ್ನಾಟಕದಿಂದ ಯಾರು ಯಾರು ಹೋದ್ರು ಎಂಬುದನ್ನು ತನಿಖೆ ಮಾಡಬೇಕು, ಜೆಡಿಎಸ್ ಮುಖಂಡರೊಬ್ರು ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ ಆತ ಕೂಡ ತನ್ನ ಬರ್ತ್ ಡೇ ಪಾರ್ಟಿಗೆ ಇಡೀ ಬಾಲಿವುಡ್ ತಂಡವನ್ನೇ ಕರೆಸಿಕೊಳ್ತಾರೆ ಅದರಲ್ಲಿ ಇಂಪ್ರಿಯಾಸ್ ಖಾತ್ರಿನೂ ಕೂಡ ಇರ್ತಾನೆ, ಅವನು ಬೆಂಗಳೂರಿಗೆ ಬಂದಾಗ ಯಾರ ಮನೆ ಬಳಕೆ ಮಾಡಿದ, ಯಾರ ಕಾರ್ ಯೂಸ್ ಮಾಡಿದ ಎಂಬುದು ತನಿಖೆ ಆಗಬೇಕು, ಇದರಿಂದ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಗೆ ಇರುವ ನಂಟು ಏನೆಂದು ಗೊತ್ತಾಗುತ್ತೆ. ನಾನು ದೇಶ ಭಕ್ತನಾಗಿ ಈ ಮಾಹಿತಿಯನ್ನು ಸರ್ಕಾರಕ್ಕೆ ಹಾಗೂ ಪೊಲೀಸ್ ಗೆ ಕೊಡ್ತೇನೆ ಕರ್ನಾಟಕದಿಂದ ಇರುವ ಒಂದು ಬೀಗತನದ ಬಗ್ಗೆ ಒಂದು ತನಿಖೆ ಮಾಡಬೇಕು ಇಲ್ಲಿಂದ ಒಬ್ರು ಬಾಂಬೆಗೆ ಹೆಣ್ಣು ಕೊಟ್ಟಿದ್ದಾರೆ ಅದರ ಬಗ್ಗೆ ಕೂಡ ಪೋಲಿಸರು ತನಿಖೆ ಮಾಡಬೇಕು. ಇಂಪ್ರಿಯಾಸ್ ಖಾತ್ರಿ ಮೂಲಕ ಇಡೀ ಬಾಲಿವುಡ್ ಸ್ಯಾಂಡಲ್ ವುಡ್ ಡ್ರಗ್ಸ್ ಸಪ್ಲೇ ಆಗ್ತಾಯಿದೆ ಎಂದು ಸಂಬರಗಿ ದೊಡ್ಡ ಬಾಂಬ್ ಸಿಡಿಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment