ಮಳವಳ್ಳಿಯ ಮಾರೇಹಳ್ಳಿ-ದೊಡ್ಡಕೆರೆಗೆ ರೈತರಿಂದ ಬಾಗಿನ ಅರ್ಪಣೆ..!

ಮಳವಳ್ಳಿ: ಮಳವಳ್ಳಿ ಪಟ್ಟಣ ಹಾಗೂ ತಾಲ್ಲೂಕಿನ ರೈತರಿಗೆ ಜೀವನಾಡಿಯಾದ ದೊಡ್ಡ ಕೆರೆ ಹಾಗೂ ಮಾರೇಹಳ್ಳಿ ರೈತರಿಗೆ ಇವೆರಡೂ ಕೆರೆಗಳು ವರದಾನವಾಗಿವೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಈ ವರ್ಷ ಯಾವುದೇ ನೀರಿನ ತೊಂದರೆ ಇಲ್ಲದೆ ಬೆಳೆಯನ್ನು ಬೆಳೆಯುವ ಅವಕಾಶವನ್ನು ವರುಣ ದೇವನು ಅನುಗ್ರಹ ಮಾಡಿರುವುದರಿಂದ ರೈತರ ಮುಖದಲ್ಲಿ ಸಂತೋಷ ಉಂಟಾಗಿದೆ ಎಂದರು. ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ನಮ್ಮ ಕನ್ನಂಬಾಡಿ ಜಲಾಶಯ ತುಂಬಿದ್ದು ಕೆರೆಗಳು ಸಹ ತುಂಬಿವೆ ಇದರಿಂದ ರೈತರು ತಮಗೆ ಅನುಗುಣವಾದ ಬೆಳೆಯನ್ನು ಬೆಳೆಯ ಬಹುದಾಗಿದೆ.ಮಳವಳ್ಳಿ ದೊಡ್ಡಕೆರೆ ಮಾರೇಹಳ್ಳಿ ಕೆರೆ ಲಕ್ಷಾಂತರ ರೈತರಿಗೆ ಇವೆರಡು ಕೆರೆಗಳು ರೈತರ ಬದುಕನ್ನು ಬಂಗಾರ ಮಾಡಿದೆ ಇಂತಹ ಕೆರೆಗಳಿಗೆ ನಾನು ಬಾಗಿನ ಅರ್ಪಿಸುತ್ತಿರುವುದು ಹರ್ಷದಾಯಕ ಎಂದರು. ರೈತರಿಗೆ ಅನುಕೂಲವಾಗುವ ರೀತಿ ಬಿತ್ತನೆ ಬೀಜ ರಸಗೊಬ್ಬರಕ್ಕೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರೈತರು ಉತ್ತಮ ಬೆಳೆಯನ್ನು ಬೆಳೆದು ಬದುಕನ್ನು ಹಸನಾಗಿಸಿಕೊಳ್ಳಿ ಎಂದು ಹಾರೈಸಿದರು. ಕಾರ್ಯಕ್ರಮ ಬಾಗಿನ ಕಾರ್ಯಕ್ರಮದಲ್ಲಿ ಜೆಡಿಎಸ್ ನ ತಾಲೂಕು ಅಧ್ಯಕ್ಷರಾದ ಮಲ್ಲೇಗೌಡ ಪುರಸಭೆ ಸದಸ್ಯರಾದ ನಂದಕುಮಾರ್, ವಡ್ಡರಹಳ್ಳಿ ಸಿದ್ದರಾಜು ,ಭಾಗ್ಯಮ್ಮ ಅಂಕ ರಾಜು ,ನೂರುಲ್ಲಾ ,ಒಕ್ಕರ ಹಳ್ಳಿ ಜಯರಾಜು, ಅಕ್ಕಿ ಶಿವಣ್ಣ, ಕಂಬರಾಜು ಎಸ್ಸಿ ಎಟಿ ನಿರ್ದೇಶಕರು ಪ್ರಭು ಪುರಸಭೆ ಮಾಜಿ ಅಧ್ಯಕ್ಷರುಗಳದ ಚಿಕ್ಕ ರಾಜು, ದೊಡ್ಡಯ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಕುಮಾರ್ ಜೆಡಿಎಸ್ ನ ಹಿಂದುಳಿದ ಅಧ್ಯಕ್ಷರು ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ವರದಿ : ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment