ದೇಶದ ಪ್ರತಿಯೊಬ್ಬ ಪ್ರಜೆಗೂ ಅಂಬೇಡ್ಕರ್ ಸ್ಫೂರ್ತಿ – ನಿಜಗುಣ ದೋರನಹಳ್ಳಿ..!.

ಶಹಾಪುರ : ಜೀವನದುದ್ದಕ್ಕೂ ಕಂಡಂತಹ ನೋವು-ನಲಿವುಗಳು, ಮಾನ ಅಪಮಾನಗಳನ್ನು ಸಹಿಸಿಕೊಂಡು ಅವುಗಳನ್ನೇ ಸಾಧನೆಯ ಮೆಟ್ಟಿಲನ್ನಾಗಿಸಿಕೊಂಡು ಭಾರತದ ಸಂವಿಧಾನ ರಚಿಸಿ ಭಾರತ ರತ್ನ ಎಂದೆನಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಎಂದು ಯುವ ಮುಖಂಡರಾದ ನಿಜಗುಣ ದೋರನಹಳ್ಳಿ ಹೇಳಿದರು.ತಾಲೂಕಿನ ಗುಂಡಳ್ಳಿ ಗ್ರಾಮದಲ್ಲಿ ಆಯೋಜಿಸಿರುವ ಮಹಾನ್ ನಾಯಕ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನ ಆಧಾರಿತ ಜೀ ಕನ್ನಡ ಧಾರಾವಾಹಿ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರಿಗೆ ಕೆಲವು ಕಿಡಿಗೇಡಿಗಳಿಂದ ಹಾಗೂ ಕೆಟ್ಟ ಮನಸ್ಥಿತಿ ಕ್ರೂರಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು ಆದ ಕಾರಣ ನೀವು ಯಾವುದಕ್ಕೂ ಹೆದರಬೇಡಿ ನಿಮ್ಮೊಂದಿಗೆ ಇಡೀ ದೇಶವೇ ಎದ್ದು ಬೆನ್ನಿಗೆ ನಿಂತಿದೆ ಎಂದು ಹೇಳಿ ಬೆಂಬಲ ಸೂಚಿಸಿ ಹೃತ್ಪೂರ್ವಕವಾದ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಮಣ್ಣ ಸಾದ್ಯಾಪುರ,ಪರುಶುರಾಮ ಕುರುಕುಂದಿ,ಶಿವಪುತ್ರಪ್ಪ ಜವಳಿ, ಬಾಲರಾಜ ಖಾನಾಪುರ,ಮರಿಲಿಂಗಪ್ಪ ಖಾನಾಪುರ, ಸಂತೋಷ ಗುಂಡಳ್ಳಿ,ಮಲ್ಲು ಹುರುಸಗುಂಡಗಿ,ಸುಭಾಷ್ ಹುರುಸಗುಂಡಗಿ,ಭೀಮಾಶಂಕರ್ ಗುಂಡಳ್ಳಿ, ಹಾಗೂ ಇತರರು ಉಪಸ್ಥಿತರಿದ್ದರು.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಸಿಂಧನೂರು..

Please follow and like us:

Related posts

Leave a Comment