ಬಾಲಿವುಡ್ ನಟ ಅರ್ಜುನ್ ಕಪೂರ್ಗೆ ಕೊರೊನಾ ಪಾಸಿಟಿವ್..!

ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ. ಈ ಬಗ್ಗೆ ಸ್ವತಃ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನನಗೆ ಕೊರೊನಾ ಸೋಂಕು ತಗುಲಿರೋದು ನಿಮಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಸದ್ಯ ನಾನು ಆರೋಗ್ಯವಾಗಿದ್ದು, ನನಗೆ ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಶನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಅರ್ಜುನ್ ಕಪೂರ್ಗೆ ಕೊರೊನಾ ಸೋಂಕು ಕಾಣಿಸಕೊಂಡ ಹಿನ್ನೆಲೆ ಬಾಲಿವುಡ್ ಸ್ಟಾರ್ ನಟ,ನಟಿಯರು ಶೀಘ್ರ ಗುಣವಾಗುವಂತೆ ಹಾರೈಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment