ಪಕ್ಷೇತರ ಅಭ್ಯರ್ಥಿಗೆ ಬುಲಾವ್ ನೀಡಿದ ಕೆ.ಎನ್.ರಾಜಣ್ಣ..!

ಶಿರಾ: ಶಿರಾ ವಿಧಾನಸಭಾ ಉಪ ಚುನಾವಣೆ ಘೋಷಣೆಗೂ ಮುನ್ನವೇ ಕಾವೇರಿದೆ. ಇತ್ತ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮೂರು ಪಕ್ಷದಲ್ಲೂ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದ್ದು ಶಿರಾ ಉಪಚುನಾವಣಾ ಅಖಾಡ ರಂಗೇರಿದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಇಂದು ಪಕ್ಷೇತರ ಅಭ್ಯರ್ಥಿ (ಜೆಡಿಯು ಪಕ್ಷದ) ಚೇತನ್ ಲಿಂಗದಹಳ್ಳಿಗೆ ಬುಲಾವ್ ನೀಡಿದ್ದು ರಾಜಕೀಯ ಚದುರಂಗದಾಟಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈಗಾಗಲೇ ನಾನು ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಎಂದು ಘೋಷಣೆ ಮಾಡಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಶಿರಾ ಭಾಗದ ಹಲವು ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ, ಇತ್ತಿಚೆಗಷ್ಟೇ ಜೆಡಿಎಸ್ ಜಿಲ್ಲಾಧ್ಯಕ್ಷ ಸೇರಿದಂತೆ ಹಲವು ಜೆಡಿಎಸ್ ಮುಖಂಡರ ಜೊತೆ ಮಾತುಕತೆ ನಡೆಸಿದ್ರು ಇನ್ನೂ ಇಂದು ಜೆಡಿಯು ಪಕ್ಷದ ಲಿಂಗದಹಳ್ಳಿ ಚೇತನ್ ಜೊತೆ 30 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು ಶಿರಾ ಉಪಚುನಾವಣೆಯ ಬಗ್ಗೆ ಚರ್ಚಿಸಿರುವ ಸಾಧ್ಯತೆಗಳಿದೆ ಎನ್ನಲಾಗಿದ್ದು, ಲಿಂಗದಹಳ್ಳಿ ಚೇತನ್ ಹಾಗೂ ಕೆ.ಎನ್.ರಾಜಣ್ಣ ಭೇಟಿ ಶಿರಾ ಉಪಚುನಾವಣಾ ವಿಚಾರವಾಗಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೆ.ಎನ್.ರಾಜಣ್ಣರ ಪಕ್ಷೇತರ ಅಭ್ಯರ್ಥಿ ಚೇತನ್ ಜೊತೆಗಿನ ಮಾತುಕತೆ ಶಿರಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment