ಮಳವಳ್ಳಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಉಚಿತವಾಗಿ ಔಷಧಿ ಸಿಂಪಡನೆ..!

ಮಳವಳ್ಳಿ: ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಪಡೆದ ಮೊಪಿಟ್ ಕಂಪನಿವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಉಚಿತವಾಗಿ ಸ್ಯಾನಿಟೈಜರ್ ಸಿಂಪಡಿಸಲಾಯಿತು. ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿಗಳಿಗೆ ಕೋರೋನಾ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟರಿ ಔಷದಿ ಸಿಂಪಡಿಸಿದರು. ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ತಾ.ಪಂ ಅಧ್ಯಕ್ಷ ಸುಂದರೇಶ್ ಕಚೇರಿ,ಸೇರಿದಂತೆ ಎಲ್ಲಾ ರೂಂಗಳಿಗೆ ಸ್ಯಾನಿಟರಿ ಸಿಂಪಡಿಸುವ ಕೋರೋನಾ ಹರಡದಂತೆ ಕ್ರಮ ಕೈಗೊಳ್ಳುತ್ತಿರುವ ಮೋಪಿಟ್ ಕಂಪನಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುಂದರೇಶ್ ಅಭಿನಂದಿಸಿದರು. ಮಳವಳ್ಳಿ ಪಟ್ಟಣದ ಪೊಲೀಸಠಾಣೆ ,ತಾಲ್ಲೂಕು ಕಚೇರಿ,ಬಿಇಓ ಕಚೇರಿ ,ಮುಂದಿನ ದಿನಗಳಲ್ಲಿ ಸಿಂಪಡಿಸಲಾಗುತ್ತದೆ ಎಂದು ಕಂಪನಿ ಸಿಬ್ಬಂದಿ ಮಲ್ಲೇಶ್ ವಾಹಿನಿಯೊಂದಿಗೆ ತಿಳಿಸಿದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment