ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ..ಕಳಪೆ ಬೀಜ ಮಾರಾಟದಿಂದ ರೈತರ ಜೀವನ ಅತಂತ್ರ…!

ಸಿಂಧನೂರು: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಗರನಾಳ ಗ್ರಾಮದಲ್ಲಿ ಅಮರೇಶಪ್ಪ ಎನ್ನುವ ರೈತ ಕೋರನ ವೈರಸ್ ನಿಂದ ಆರ್ಥಿಕ ಸಂಕಷ್ಟದ ನಡುವೆಯೂ ತನ್ನ 50 ಎಕರೆ ಹೊಲದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆಯುವ ಉದ್ದೇಶದಿಂದ ನಗರದ ರುದ್ರಗೌಡ ಪೆಟ್ರೋಲ್ ಬ್ಯಾಂಕ್ ಮುಂದುಗಡೆ ಇರುವ ಮಹಾಲಕ್ಷ್ಮಿ ಟ್ರೇಡರ್ಸ್ ನಲ್ಲಿ ಉತ್ತಮ ಕಂಪನಿಯ ಬೀಜಗಳು ಎಂದು ತೇಜಾ ಕಂಪನಿಯ ಬೀಜಗಳನ್ನು ಈ ರೈತರಿಗೆ ವಿತರಿಸಿ ವಂಚಿಸಿದ್ದಾರೆ. ಈ ಮಾಲೀಕನ ಮಾತನ್ನು ನಂಬಿ ತನ್ನ 50 ಎಕರೆ ಹೊಲದಲ್ಲಿ ಸೂರ್ಯಕಾಂತಿ ತೇಜ್ ಕಂಪನಿಯ ಬೀಜವನ್ನು ಬಳಕೆ ಮಾಡಿದ್ದಾನೆ. ಆದರೆ ಈ ಕಂಪನಿಯ ಬೀಜಗಳಿಂದ ಸೂರ್ಯಕಾಂತಿ ಬೆಳೆಯೂ ಸಮೃದ್ಧವಾಗಿ ಬೆಳೆದಿದ್ದು ಬಿಟ್ಟರೆ ಮೊಳಕೆಯೊಡೆದಿಲ್ಲ. ಇದೇ ಗ್ರಾಮದಲ್ಲಿ ಇತರೆ ರೈತರು ಬೇರೆ ಕಂಪನಿಯ ಬೀಜ ಬಿತ್ತಿ ಬೆಳೆದು ಕಟಾವು ಮಾಡುವುದು ಅರಿತು ಅಂಗಡಿ ಮಾಲೀಕನ ಮೂಲಕ ತೇಜ ಕಂಪನಿಗೆ ವಿಷಯ ತಿಳಿಸಿದಾಗ ಅಂಗಡಿ ಮಾಲೀಕ ಹಾಗೂ ತೇಜಾ ಕಂಪನಿಯವರು ನಮಗೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ . ನೀನು ಏನಾದ್ರೂ ಮಾಡ್ಕೋ, ಯಾರಿಗೆ ಬೇಕಾದರೂ ದೂರು ಕೊಡು ಎಂದು ಹೇಳುತತ್ತಿದ್ದಾರೆಂದು ರೈತ ತನ್ನ ಅಳಲನ್ನು ತೋಡಿಕೋಳ್ಳುತ್ತಿದ್ದಾರೆ. ಇದರ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಅವರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಕೇವಲ ಒಮ್ಮೆ ಮಾತ್ರ ಅವರ ಇಲಾಖೆಯ ಅಧಿಕಾರಿಗಳನ್ನು ಹೊಲಕ್ಕೆ ಕಳುಹಿಸಿದ್ದು ಬಿಟ್ಟರೆ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ ಎಂದು ರೈತ ಅಮರೇಶಪ್ಪ ತನ್ನ ನೋವನ್ನು ವ್ಯಕ್ತಪಡಿಸಿದರು. ಒಟ್ಟಾರೆ ಕೊರೊನಾ ಆಘಾತದಿಂದ ಚೇತರಿಸಿಕೊಳ್ಳದ ರೈತಾಪಿ ವರ್ಗಕ್ಕೆ ಮಹಾಲಕ್ಷ್ಮಿ ಟ್ರೇಡರ್ಸ್ ಮಾಲೀಕ ಕಳಪೆ ಬೀಜ ಮಾರಾಟ ಮಾಡಿ ರೈತನಿಗೆ ವಂಚಿಸಿದರು. ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಕಳಪೆ ಬೀಜಗಳನ್ನು ಮಾರಾಟ ಮಾಡುವ ಅಂಗಡಿಯ ಮಾಲೀಕರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನಾದರೂ ಹೊಗರನಾಳ ಗ್ರಾಮದ ರೈತನಾದ ಅಮರೇಶಪ್ಪ ಬೆಳೆದ ಐವತ್ತು ಎಕರೆಯ ಸೂರ್ಯಕಾಂತಿ ಬೆಳೆಗೆ ಪರಿಹಾರವನ್ನು ಒದಗಿಸಿ ಅಂಗಡಿ ಮಾಲೀಕ ಹಾಗೂ ಕಂಪನಿಯ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕು.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment