ಗ್ರಾಮ ಸ್ವರಾಜ್ಯಕ್ಕೆ ಹೆಚ್ಚಿನ ಆದ್ಯತೆ- ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ.ಪಟೇಲ್ ..!

ಶಿರಾ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎನ್ನುವುದಕ್ಕಿಂತ ಗ್ರಾಮ ಸರ್ಕಾರಗಳ ಸಬಲೀಕರಣಕ್ಕೆ ರಾಮಕೃಷ್ಣ ಹೆಗ್ಗಡೆ ಮಹತ್ವ ನೀಡಿದ್ದಾರೆ. ಗ್ರಾಮ ಸ್ವರಾಜ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಪಕ್ಷದಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ. ಪಟೇಲ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಶಿರಾ ವಿಧಾನ ಸಭಾ ಚುನಾವಣಾ ಹಿನ್ನೆಲೆ ಪಕ್ಷ ಸಂಘಟನೆ ಮತ್ತು ಉಪ ಚುನಾವಣೆಯಲ್ಲಿ ಸಂಭವನೀಯ ಅಭ್ಯರ್ಥಿ ಲಿಂಗದಳ್ಳಿ ಚೇತನ್ ಕುಮಾರ್ ಅವರನ್ನು ಭೇಟೆ ಮಾಡಿ ಪಕ್ಷ ಸಂಘಟನೆ ಮತ್ತು ಜವಾಬ್ದಾರಿ ಸಲುವಾಗಿ ಭೇಟಿ ನೀಡಿ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಹಳ್ಳಿಗಳ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂಬ ಉದ್ದೇಶದಿಂದ ರಾಜ್ಯದ 6 ಸಾವಿರ ಪಂಚಾಯಿತಿಗಳ ಪೈಕಿ ಕನಿಷ್ಠ 150 ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವಯವ ಕೃಷಿಕರು ಮತ್ತಿತರರ ಜೊತೆ ಸೇರಿಕೊಂಡು ಪಂಚಾಯಿತಿಗಳ ಸಬಲೀಕರಣ ಬಗ್ಗೆ ಪಕ್ಷವು ಸಜ್ಜಾಗಿದೆ. ರಾಮಕೃಷ್ಣ ಹೆಗ್ಗಡೆ ಅವರಂತಹ ಶ್ರೇಷ್ಠ ರಾಜಕಾರಣಿ ಕೆಲಸ ಮಾಡಿದ ಪಕ್ಷ ನಮ್ಮ ತಂದೆ ಜೆ.ಎಚ್. ಪಟೇಲ್ ಮುನ್ನಡೆಸಿದ್ದ ಪಕ್ಷ ನಮ್ಮದು. ಈಗ ರಾಜ್ಯದಲ್ಲಿ ನನ್ನ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಮ್ಮ ಪಕ್ಷ ಅಧಿಕಾರ ನಡೆಸುತ್ತಿದೆ.ಶಿರಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿದೆ. ನಾವು ಕೆಲಸದ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ನಮ್ಮದು ಶಾಂತಿಯುತ ರಾಜಕರಣ ಮಾಡುವಂತಹ ಗುರಿ ಹೊಂದಿದ್ದೇವೆ. ದ್ವೇಷ ರಾಜಕಾರಣ ನಮಗೆ ಅಗತ್ಯ ಇಲ್ಲ. ಪಕ್ಷದ ಶಿರಾ ತಾಲ್ಲೂಕಿನಲ್ಲಿ ಲಿಂಗದಳ್ಳಿ ಚೇತನ್ ಕುಮಾರ್ ಅದರು ತಾಲ್ಲೂಕಿನ ಬೂತ್ ಮಟ್ಟದಲ್ಲಿ ಸಂಘಟನೆ ಕಾರ್ಯ ಭರದಿಂದ ಪ್ರಚಾರದ ಕಾರ್ಯ ನಡೆದಿದೆ. ಮುಂದೆ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಲಿದೆ. ಜನರು ಬದಲಾವಣೆ ಬಯಸಿದ್ದಾರೆ ಈ ನಿಟ್ಟಿನಲ್ಲಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ ಎಂದರು. ಇದೆ ಸಂದರ್ಭದಲ್ಲಿ ವಿವಿಧ ಜಿಲ್ಲೆಯ ವಿವಿಧ ಮುಖಂಡರು ಸ್ಥಳಿಯ ಅಕ್ಷಾಂಕಿ ಚೇತನ ಕುಮಾರ್ ಮತ್ತಿತರು ಹಾಜರಾಗಿದ್ದರು.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment