ಡಾ.ಸರ್.ಎಂವಿಶ್ವೇಶ್ವರಯ್ಯ ಯುವಕರ ಸಂಘ ವತಿಯಿಂದ ಗಿಡನೆಡುವ ಕಾರ್ಯಕ್ರಮ..!

ಮಳವಳ್ಳಿ: ಡಾ. ಸರ್ .ಎಂ ವಿಶ್ವೇಶ್ವರಯ್ಯರವರ 160 ನೇ ಜನ್ಮ ದಿನ ಹಾಗೂ ಗಿಡನೆಡುವ ಕಾರ್ಯಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಪೇಟೆಬೀದಿ ವಿಶ್ವೇಶ್ವರಯ್ಯ ವೃತ್ತದಲ್ಲಿರುವ ವಿಶ್ವೇಶ್ವರಯ್ಯರವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಡಾ. ಸರ್ .ಎಂ ವಿಶ್ವೇಶ್ವರಯ್ಯ ಯುವಕರ ಸಂಘದ ಅಧ್ಯಕ್ಷ ಚಿಕ್ಕಮರಿ ಮಾತನಾಡಿ, ಕಳೆದ 16 ವರ್ಷದಿಂದಲೂ ಪ್ರತಿ ವರ್ಷವೂ ಜನ್ಮದಿನ ಆಚರಣೆ ಜೊತೆಗೆ ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಸಹ ಕೃಷ್ಣಯ್ಯನಕಟ್ಟೆ ಬಳಿ ಗಿಡ ನೆಡುವ ಜೊತೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು ಎಂದರು. ಇನ್ನೂ ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ಮಾತನಾಡಿ, ಡಾ.ಸರ್.ಎಂವಿಶ್ವೇಶ್ವರಯ್ಯ ಯುವಕರ ಸಂಘದ ಅಧ್ಯಕ್ಷ ಚಿಕ್ಕಮರಿ ರವರು ಒಬ್ಬ ಅಂಗವಿಕಲರಾಗಿ ಪ್ರತಿ ವರ್ಷವೂ ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆ ಮಾಡುತ್ತಿರುವ ಶ್ಲಾಘನೀಯ ವ್ಯಕ್ತ ಪಡಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಬೇಸಾಯ ಮಾಡಲು ಕಾರಣಕರ್ತರಾದ ನಾಲ್ವಡಿ ಕೃಷ್ಣರಾಜ ಒಡೆಯರ ಹಾಗೂ ಡಾ. ಸರ್ ಎಂ ವಿಶ್ವೇಶ್ವರಯ್ಯರವರು ನೆನಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಪುರಸಭಾಧ್ಯಕ್ಷರುಗಳಾದ ನಂಜುಂಡಯ್ಯ, ಎಂ.ಹೆಚ್ ಕೆಂಪಯ್ಯ, ಚಿಕ್ಕರಾಜು, ಪುರಸಭೆ ಸದಸ್ಯರಾದ ಜಯಸಿಂಹ, ರವಿ,ಪತಂಡೆನಾಗರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸಿ ನಾಗರಾಜು. ಹಾಫ್ ಕಮ್ಸ್ ಸ್ವಾಮಿ,ಬಸವರಾಜು, ಮೆಡಿಕಲ್ ಕುಮಾರ್, ಹಾಗೂ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment