ಸಿಸಿಬಿ ಕಚೇರಿಗೆ ಆಗಮಿಸಿದ ಐಂದ್ರಿತಾ ದಂಪತಿ : ಪ್ರತ್ಯೇಕ ವಿಚಾರಣೆ ನಡೆಸಲಿರುವ ಸಿಸಿಬಿ..!

ಬೆಂಗಳೂರು : ಸ್ಯಾಂಡಲ್ವುಡ್ ಸ್ಟಾರ್ ಐಂದ್ರಿತಾ ರೇ ಹಾಗು ನಟ ದಿಗಂತ್ ಸಿಸಿಬಿ ವಿಚಾರಣೆಗೆ ಆಗಮಿಸಿದ್ದಾರೆ. ಈಗಾಗಲೇ ಸಿಸಿಬಿ ಕಚೇರಿಗೆ ಒಳಗೆ ತೆರಳಿರುವ ಐಂದ್ರಿತಾ ಹಾಗು ದಿಗಂತ್ರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತೆ ಎನ್ನಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ತಡರಾತ್ರಿ ವಕೀಲರನ್ನು ಸಂಪರ್ಕಿಸಿರುವ ಮನಸಾರೆ ಜೋಡಿ, ವಿಚಾರಣೆ ಹೇಗೆ ಎದುರಿಸಬೇಕು ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕ್ಯಾಸಿನೋ ಮಾಲೀಕ ಶೇಖ್ ಫಾಝಿಲ್ ಜೊತೆ ಐಂದ್ರಿತಾ ಫೋಟೋಗಳು ವೈರಲ್ ಆಗಿದ್ದರಿಂದ ಸ್ಟಾರ್ ದಂಪತಿಗಳಿಬ್ಬರನ್ನು ಸಿಸಿಬಿ ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment