ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಬೆಂಬಲ ನೀಡಲು ಪ್ರಗತಿಪರ ಮುಖಂಡ ಶೇಕ್ಷಖಾದ್ರಿ ಮನವಿ..!

ಸಿಂಧನೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟ. ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರದಂದು ಕರೆ ನೀಡಿ ಬಂದ್ ಬೆಂಬಲ ನೀಡುವಂತೆ ಮನವಿ ಮಾಡಲು ಪ್ರಮುಖ ಬದಿಗಳಲ್ಲಿ ಆಟೋಗಳಲ್ಲಿ ಸಂಚರಿಸಲಾಯಿತು. ನಗರದ ಗಾಂಧಿ ವೃತ್ತದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಂದ್ರ ಹಾಗೂ ರಾಜ್ಯ ಲೋಕಸಭಾ, ವಿಧಾನ ಸಭೆಗಳನ್ನು ಕತ್ತಲಲ್ಲಿಟ್ಟು ರೈತ, ದಲಿತರ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಪಾಸ್ ಮಾಡುವ ಮೂಲಕ ದೇಶದ ಜನತೆಗೆ ವಂಚಿಸಲಾಗುತ್ತಿದೆ. ಸಂವಿಧಾನ ರಕ್ಷಣೆಗಾಗಿ ಯುವ ಜನರಿಗೆ ಉದ್ಯೋಗಾಗಿ, ಕಾರ್ಮಿಕ, ರೈತರ ರಕ್ಷಣೆಗಾಗಿ ಮಾಡುವ ಹೋರಾಟಕ್ಕೆ ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಬೆಂಬಲ ನೀಡಲು ಮನವಿ ಮಾಡಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment