ಅಂತರ್ಜಾತಿ ವಿವಾಹಕ್ಕೆ ಕಡಿವಾಣ ಹಾಕಲು ಮುಂದಾದ ಕೊಡವ ಸಮಾಜ..!

ಮಡಿಕೇರಿ: ಆಧುನೀಕತೆಯ ಕಾರಣದಿಂದಾಗಿ ಇಂದು ಸಮಾಜದಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಈ ಅಂತರ್ಜಾತಿ ವಿವಾಹದಿಂದಾಗಿ ಕೆಲವೊಂದು ಸಣ್ಣ ಸಮುದಾಯಗಳಿಗೆ ಗಂಡು ಮತ್ತು ಹೆಣ್ಣು ಸಿಗುವುದೇ ಕಷ್ಟವಾಗಿದೆ. ಉತ್ತರ ಕನ್ನಡದ ಹವ್ಯಕ ಸಮುದಾಯದ ವರರಿಗೆ ಸ್ವಜಾತೀಯ ವಧುಗಳು ಸಿಗುವುದೇ ದುರ್ಲಭವಾಗಿದೆ. ಇತ್ತೀಚೆಗೆ ರಾಜ್ಯದ ಪುಟ್ಟ ಜಿಲ್ಲೆ, ವಿಶಿಷ್ಟ ಸಂಸ್ಖೃತಿಯ ಕೊಡಗಿನಲ್ಲೂ ಕೊಡವ ಜನಾಂಗದಲ್ಲಿ ಯುವತಿಯರ ಕೊರತೆ ಕಂಡು ಬರುತ್ತಿದೆ. ಈ ಅಸಮತೋಲನಕ್ಕೆ ಕಡಿವಾಣ ಹಾಕಲು ಕೊಡವ ಮುಖಂಡರು ಮುಂದಾಗಿದ್ದಾರೆ. ಕಲ್ಯಾಣ ಮಂಟಪ ಬಾಡಿಗೆ ನೀಡುವುದಿಲ್ಲ ಎಂಬ ತೀರ್ಮಾನದೊಂದಿಗೆ, ಆ ಯುವಕ ಕೊಡವರ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ತೊಟ್ಟು ವಿವಾಹದಲ್ಲಿ ಸಂಭ್ರಮಿಸುವಂತಿಲ್ಲ, “ಗೆಜ್ಜೆತಂಡ್” ಅನ್ನು ಹಿಡಿಯುವಂತಿಲ್ಲ ಎಂದು ಬಾಳೆಲೆ ಕೊಡವ ಸಮಾಜದಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Leave a Comment