ಒಬ್ಬರು ಸ್ವತಂತ್ರ ಪೂರ್ವದಲ್ಲಿ ಹಾಗೂ ಮತ್ತೊಬ್ಬರು ಸ್ವತಂತ್ರದ ನಂತರ ಛಾಪು ಮೂಡಿಸಿದವರು -ಸೋಮಶೇಖರ್..!

ಪಿರಿಯಾಪಟ್ಟಣ: ಒಬ್ಬರು ಸ್ವತಂತ್ರ ಪೂರ್ವದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ, ಇನ್ನೊಬ್ಬರು ಸ್ವತಂತ್ರ ನಂತರ ಭಾರತದ ಪ್ರಧಾನಿಯಾಗಿ ತಮ್ಮ ಛಾಪನ್ನು ಮೂಡಿಸಿದವರು ಅವರೇ ನಮ್ಮ ದೇಶದ ಮಹಾನ್ ಚೇತನಗಳಾದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಪಿರಿಯಾಪಟ್ಟಣ ತಾಲೂಕಿನ ಕ್ಷೇತ್ರ ಶಿಕ್ಷಣ ಸಂಯೋಜಕರಾದ ಸೋಮಶೇಖರ್ ಹೇಳಿದರು. ಅವರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಗ್ರಾಮಪಂಚಾಯತಿ ಆವರಣದಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 151ನೇ ಮತ್ತು ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರ 116ನೇ ಜನ್ಮದಿನ ಹಾಗೂ ವಿಶೇಷ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇವರಿಬ್ಬರಲ್ಲಿ ನಾವು ಗಮನಿಸಬೇಕಾದ ಮೂರು ಅಂಶಗಳೆಂದರೆ, ಸರಳತೆ, ಸ್ವಚ್ಛತೆ ಹಾಗೂ ಪ್ರಾಮಾಣಿಕತೆ.ಇವರ ಕೆಲವು ತತ್ವ-ಆದರ್ಶಗಳನ್ನು ಅರಿತುಕೊಂಡು ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಇಂತಹ ಮಹಾನ್ ವ್ಯಕ್ತಿಗಳ ಮಹತ್ವವನ್ನು ನಮಗಿಂತ ಬೇರೆ ದೇಶದವರು ಅರಿತು ತಮ್ಮ ಜೀವನದಲ್ಲಿ ಇವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಲೆಕ್ಕ ಸಹಾಯಕ ಗಣೇಶ್ ಮಾತನಾಡಿ ರೈತರು ನರೇಗಾ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿಯ ಹೆಸರಿನಲ್ಲಿ ಬಡವರಿಗೆ ಸರಕಾರದಿಂದ ಉದ್ಯೋಗಖಾತ್ರಿ ಯೋಜನೆ ರೂಪಗೊಂಡಿದ್ದು ಬಡವರಿಗೆ ಕೂಲಿ ನೀಡಿ ಅವರ ಅಭಿವೃದ್ಧಿಯಾಗಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜಯರಾಮೇಗೌಡ, ರಾಜಶೇಖರ್, ನಾಗಣ್ಣ, ಡಾಟಾ ಆಪರೇಟರ್ ದೀಪು, ಪಂಚಾಯತಿ ಸಿಬ್ಬಂದಿಗಳಾದ ಮುರುಗೇಶ್, ದೇವರಾಜ್, ಅಣ್ಣಯ್ಯ, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ವರದಿ-ಮಾಗಳಿ ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Please follow and like us:

Related posts

Leave a Comment