ತಾಲೂಕು ಆರೋಗ್ಯ ಇಲಾಖೆಯ ಬೇಜವಾಬ್ದಾರಿ ತನಕ್ಕೆ ಲ್ಯಾಬ್ ಟೇಕ್ನಿಷಿಯನ್ ಪರದಾಟ..!

ನಂಜನಗೂಡು: ನಂಜನಗೂಡು ತಾಲೂಕು ಆರೋಗ್ಯ ಇಲಾಖೆಯಿಂದ ದೊಡ್ಡ ಎಡವಟ್ಟು ನಡೆದಿದ್ದು, ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಉಮೇಶ್ ಗೆ ಕೆಲ ದಿನಗಳಿಂದ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು ಅದಕ್ಕಾಗಿಯೇ ಆತ ಹತ್ತು ದಿನಗಳ ಹಿಂದೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು, ಉಮೇಶ್ ಗೆ ಕೊರೊನಾ ಲಕ್ಷಣಗಳು ಇದ್ದ ಕಾರಣ ಅಂದಿನಿಂದ ಹೋಂ ಕ್ವಾರೆಂಟೈನ್ ಗೆ ಒಳಗಾಗಿದ್ದರು. ಕೊರೊನಾ ಪರೀಕ್ಷೆ ಮಾಡಿಸಿ ಹತ್ತು ದಿನಗಳು ಕಳೆದರು ವರದಿ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ವರದಿ ಬರುವುದಕ್ಕೂ ಮುನ್ನವೇ ಉಮೇಶ್ ನನ್ನು ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ವರದಿ ನೀಡದೇ ಕೆಲಸಕ್ಕೆ ಹೇಗೆ ಹಾಜರಾಗುವುದು ನನಗೆ ಕೊರೊನಾ ಪಾಸಿಟೀವ್ ಇದ್ದಲ್ಲಿ ಬೇರೆಯವರಿಗೂ ಸೋಂಕು ಹರಡಬಹುದು ಅಧಿಕಾರಿಗಳು ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂಬುದು ನನಗೆ ಗೊಂದಲವಾಗಿದೆ ಎಂದು ಉಮೇಶ್ ತನ್ನ ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ವಿಚಾರವಾಗಿ ಜನಸಂಗ್ರಾಮ ಪರಿಷತ್ ನ ವಿಭಾಗಿಯ ಸಂಚಾಲಕ ನಗರ್ಲೆ ವಿಜಯಕುಮಾರ್ ಮಾತನಾಡಿ ಇಲಾಖೆಯ ನೌಕರರ ಪಾಡೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು ಕೆಲವೆಡೆ ಸಾರ್ವಜನಿಕರಿಗೆ ಕೋರೋನ ನೆಗೆಟಿವ್ ಬಂದಿದ್ದರೂ ಪಾಸಿಟಿವ್ ಬಂದಿದೆ ಎಂದು ಮೆಸೇಜ್ ಕಳುಹಿಸುವ ಮೂಲಕ ಆತಂಕ ಸೃಷ್ಟಿಸುತ್ತಿದ್ದಾರೆ. ಇದರ ಮರ್ಮವೇನು ಜಿಲ್ಲಾ ಮತ್ತು ತಾಲೂಕು ಆಡಳಿತ ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment