ಆತ್ಯಾಚಾರ ನಡೆಸಿ ಬರ್ಬರ ಹತ್ತೆ ಮಾಡಿದ ವಿಕೃತ ಕಾಮಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ..!

ಸಿಂಧನೂರು: ನಗರದ ಪ್ರವಾಸಿ ಮಂದಿರದಿಂದ ಕೊರಮ, ಕೊರಚ, ಕೊರವ, ಭಜಂತ್ರಿ ಸಮುದಾಯಗಳ ಒಕ್ಕೂಟ ಕುಳುವ ಮಹಾ ಸಂಘದ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ 19 ವರ್ಷದ ಬಾಲಕಿ ಮೇಲೆ ನಡೆದ ಆತ್ಯಾಚಾರ ಪ್ರಕರಣವನ್ನು ಖಂಡಿಸಿ ತಹಶಿಲ್ದಾರ ಕಚೇರಿ ವರೆಗೆ ಪ್ರತಿಭಟನೆ ಮೆರವಣಿಗೆ ಮಾಡಿದರು. ಕುಳುವ ಮಹಾ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ ಭಜಂತ್ರಿ ಮಾತನಾಡಿ ದೇಶದಾದ್ಯಂತ ದಿನನಿತ್ಯ ಆತ್ಯಾಚಾರ, ಗ್ಯಾಂಗ್ ರೇಪ್ ಗಳು ಹೆಚ್ಚು ನಡೆಯುತ್ತಿದೆ. ಕೆಲವೊಂದು ಬಹಿರಂಗ ಗೊಂಡರೆ ಬಹುತೇಕ ಆತ್ಯಾಚಾರ ಪ್ರಕರಣಗಳು ಮುಚ್ಚಿ ಹೋಗುತ್ತದೆ. ವಿಕೃತ ಕಾಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ವಿಫಲತೆ ಪರಿಣಾಮವಾಗಿ ಹತ್ರಾಸ್ ಗ್ರಾಮದ 19 ವರ್ಷದ ಮನಿಷ್ ವಾಲ್ಮೀಕಿ ಮೇಲೆ ಅತ್ಯಾಚಾರ ಮಾಡಿ ಕುಟುಂಬಕ್ಕೂ ಶವವನ್ನು ಕೊಡದೇ ಸುಟ್ಟ ಹಾಕಲಾಗಿದೆ. ಕೂಡಲೇ ಆತ್ಯಾಚಾರ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯ ರಾಜಿನಾಮೆ ಪಡೆಯಬೇಕು. ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ಜೊತೆಗೆ ಪರಿಹಾರ ಕೊಡಬೇಕು ಎಂದು ಹೇಳಿದರು. ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ ಸಲ್ಲಿಸಿದರು.ಈ ಸಂಧರ್ಭದಲ್ಲಿ ಗೌರವ ಅಧ್ಯಕ್ಷ ದುರುಗಪ್ಪ ಕಾರ್ಲಕುಂಟಿ, ಉಪಾಧ್ಯಕ್ಷ ನಿರುಪಾದಿ ತುರಡಗಿ, ಪ್ರಧಾನ ಕಾರ್ಯದರ್ಶಿ ಅಂಬಣ್ಣ ಉದ್ಬಾಳ, ಕಾರ್ಯದರ್ಶಿ ಹನುಮಂತ ಸುಂಕೇಶ್ವರ್, ಯಲ್ಲಪ್ಪ, ಹನುಮಂತ ವಂಕಲಕುಂಟಿ, ಹನುಮಂತ ನಂದವಾಡಿ, ಗುಂಡಪ್ಪ ಕಬ್ಬರಗಿ,ರಾಮು ಕೂಡ್ಲಿಗಿ, ಸೇರಿದಂತೆ ಇತರರು ಭಾಗವಹಿಸಿದರು.

ವರದಿ-ಸೈಯ್ಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಸಿಂಧನೂರು

Please follow and like us:

Related posts

Leave a Comment