ಕಾಡಾನೆ ಹಾವಳಿಗೆ ನಲುಗಿದ ಮಳವಳ್ಳಿ ಗ್ರಾಮಸ್ಥರು..!

ಮಳವಳ್ಳಿ: ಮಳವಳ್ಳಿಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ರೈತರ ಜಮೀನು, ಹಳ್ಳಗಳಲ್ಲಿ ಕಾಡಾನೆಗಳು ಬಿಡಾರ ಹೂಡಿವೆ. ಇಂದು ಕಾಡಾನೆ ದಾಳಿಯಿಂದ ಬೈಕ್ ಜಖಂಗೊಂಡಿದ್ದು, ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಳೆದ ಆರು ತಿಂಗಳಗಳಿಂದ ರೈತರ ಜಮೀನಿನ ಮೇಲೆ ಕಾಡಾನೆ ದಾಳಿಯಿಂದ ಲಕ್ಷಾಂತರ ರೂ ನಷ್ಟವಾಗಿದೆ.ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ವರದಿ- ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment