ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ ರಾಮಲಿಂಗರೆಡ್ಡಿ..!

ಆನೇಕಲ್: ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಕೇಸ್ ದಾಖಲಾದ ಹಿನ್ನೆಲೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ. ಸಣ್ಣ-ಪುಟ್ಟ ವಿಚಾರಕ್ಕೆ ಕೇಸು ದಾಖಲಿಸುವುದು ಸರಿಯಲ್ಲ, ಚಾಲಕನಿಗೆ ಗೊತ್ತಾಗದೆ 100ಮೀಟರ್ ಒಳಗೆ ಹೋಗಿದ್ದಾರೆ ಅಷ್ಟೇ ಇನ್ನು ಮುಂದೆ ಈ ರೀತಿ ಮಾಡಬೇಡಿ ಅಂತಾ ಪೊಲೀಸರು ಹೇಳಿದರೆ ಮುಗಿದು ಹೋಗುತ್ತಿತ್ತು. ಚಿಕ್ಕ ವಿಷಯವನ್ನು ದೊಡ್ಡದನ್ನಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಡಿಜೆ ಹಳ್ಳಿ ಕೆಜಿಹಳ್ಳಿ ಗಲಾಟೆ ವಿಚಾರ ಪೊಲೀಸರು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಗಲಾಟೆಗೆ ಕಾರಣ. ಸರ್ಕಾರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಸಂಪತ್ ರಾಜ್ ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲಿ. ನವೀನ್ ನನ್ನು ಕೂಡಲೇ ಬಂಧಿಸಿದ್ದರು ಕೂಡ ಈ ಗಲಾಟೆ ಆಗುತ್ತಿರಲಿಲ್ಲ. ಆರ್ ಆರ್ ನಗರ ಚುನಾವಣೆಗೆ ಒಂದು ವಾರ್ಡಿಗೆ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಕೂಡ ನೇಮಕ ಮಾಡಲಾಗಿದೆ. ಅವರು ಕೂಡ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದು ಗುಡುಗಿದರು. ಇಷ್ಟಕ್ಕೆ ಸುಮ್ಮನಾಗದ ರಾಮಲಿಂಗಾರೆಡ್ಡಿ ಸರ್ಕಾರ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಬರಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆಯೇ ಹೊರತು ಬೇರೆ ಯಾರು ಇದ್ದಾರೆ ಎಂಬುವುದನ್ನು ಪತ್ತೆ ಹಚ್ಚುತ್ತಿಲ್ಲಾ. ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ಯಾರೂ ಕೂಡ ಇಲ್ವಾ? ರಾಗಿಣಿ-ಸಂಜನಾ ತಪ್ಪು ಮಾಡಿರಬಹುದು ನಾನು ಇಲ್ಲ ಎಂದು ಹೇಳುವುದಿಲ್ಲ. ನಾನು ಕೂಡ ಗೃಹ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಡ್ರಗ್ಸ್ ತಡೆಯುವುದರ ಬಗ್ಗೆ ಸಾಕಷ್ಟು ಪ್ರಿಯಾರಿಟಿ ಕೊಟ್ಟಿದ್ದೆ. ಡ್ರಗ್ಸ್ ಬರುತ್ತಿರುವ ಮೂಲವನ್ನು ಕಂಟ್ರೋಲ್ ಮಾಡಬೇಕಿದೆ. ಇದರ ಬಗ್ಗೆ ಪೊಲೀಸರಿಗೂ ಕೂಡ ಸಾಕಷ್ಟು ಮಾಹಿತಿ ಇದೆ. ಡ್ರಗ್ಸ್ ಪ್ರಕರಣ ಯುವಜನಾಂಗವನ್ನು ಹಾಳುಮಾಡುತ್ತಿದೆ. ಆದ್ರೆ ಈ ಮೂರು ಜನರನ್ನೆ ಕಾನೂನು ಯಾಕೆ ಟಾರ್ಗೆಟ್ ಮಾಡುತ್ತಲಿದೆ. ಇದನ್ನೇಲ್ಲಾ ನೋಡಿದರೆ ಈ ಪ್ರಕರಣ ಹಳ್ಳ ಹಿಡಿಯಬಹುದು ಎನ್ನಿಸುತ್ತಿದೆ. ಉಳಿದವರ ಬಂಧನ ಯಾಕೆ ಆಗುತ್ತಿಲ್ಲ ಇದರ ಬಗ್ಗೆ ಗೃಹ ಮಂತ್ರಿಗಳಿಗೆ ಮಾಹಿತಿ ಇಲ್ವಾ. ಎಂದು ಬಿಜೆಪಿ ಸರ್ಕಾರದ ವಿರುದ್ದ ಆನೇಕಲ್ ನಲ್ಲಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಗುಡುಗಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment