ಜೆಡಿಎಸ್ ಆಭ್ಯರ್ಥಿ ಚೌಡರೆಡ್ಡಿಗೆ ಮತನೀಡಿ-ಶಿವಶಂಕರ್..

ತಿಪಟೂರು: ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಚೌಡರೆಡ್ಡಿಗೆ ಮತನೀಡಿ ಎಂದು ಶಿವಶಂಕರ್ ತಿಳಿಸಿದರು.ತಿಪಟೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಆಗ್ನೇಯ ಪದವಿದರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾನಾಡಿದ ಶಿವಶಂಕರ್ ‘ಶಿಕ್ಷಕರ ಮತ್ತು ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಲ್ಲಿ ಜೆ.ಡಿ.ಎಸ್ ಪ್ರಯತ್ನಿಸುತ್ತಿದೆ, ದೇಶದಲ್ಲಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಿ ದೇಶವನ್ನು ಅಭಿವೃದ್ಧಿಪಡಿಸಲು ಜೆ.ಡಿ.ಎಸ್ನ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿಗೆ ಮತನೀಡಿ, ಅವರು ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದು ಸಕಾಷ್ಟು ಕೆಲಸಗಳನ್ನು ಮಾಡಿದ್ದಾರೆ,ಆದರೆ ಬಿ.ಜೆ.ಪಿ ಯವರು ವೀರಶೈವ ಮತಗಳು ನಮ್ಮ ಪಕ್ಷಕ್ಕೆ ಎಂದು ಮಾತನಾಡುತ್ತಾರೆ ಜಾತಿಯ ಆಧಾರದ ಮೇಲೆ ಚುನಾವಣೆ ಮಾಡಲು ಆಗುವುದಿಲ್ಲ, ಎಲ್ಲಾ ಪಕ್ಷಗಳಲ್ಲು ಎಲ್ಲಾ ಜಾತಿಯವರಿದ್ದಾರೆ, ದಯವಿಟ್ಟು ಎಲ್ಲರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಚೌಡರೆಡ್ಡಿಗೆ ಮತ ಹಾಕುವಂತೆ ಪ್ರೇರೇಪಿಸಿ ಎಂದರು.

ವರದಿ-ಸಿದ್ದೇಶ್ ಎಕ್ಸ್ ಪ್ಎಸ್ ಟಿವಿ ತಿಪಟೂರು

Please follow and like us:

Related posts

Leave a Comment