ಅಶೋಕ್ ಗಸ್ತಿ ಪತ್ನಿಗೆ ರಾಜ್ಯಸಭಾ ಸ್ಥಾನ ನೀಡಬೇಕು..!

ಲಿಂಗಸೂಗೂರು: ಇತ್ತೀಚಿಗೆ ನಿಧನ ಹೊಂದಿದ ರಾಜ್ಯ ಸಭಾ ಸದಸ್ಯ ಅಶೋಕ್ ಗಸ್ತಿ ಅವರ ಸ್ಥಾನಕ್ಕೆ ಅವರ ಪತ್ನಿಯನ್ನು ನೇಮಕ ಮಾಡಬೇಕೆಂದು ಬಿಜೆಪಿ ಮಂಡಲ ಕಾರ್ಯದರ್ಶಿ ಲಿಂಗಸ್ಗೂರು ಜ್ಯೋತಿ ಸುಂಕದ್ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಳಾ ಮೋರ್ಚಾ ರಾಯಚೂರು ಶುಭಾ ಕಟವ್ ಸರ್ಕಾರಕ್ಕೆ ಒತ್ತಾಯಿಸಿದರು. ಅಶೋಕ್ ಅಸ್ತಿ ಯವರು 30-40 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಮಹಾಮರಿ ಕೋರಾನ ಸೋಂಕಿಗೆ ಬಲಿಯಾಗಿರುವುದು ನೋವಿನ ಸಂಗಾತಿ. ಅಧಿಕಾರ ಅನುಭವಿಸುವ ಮುನ್ನವೇ ಮೃತಪಟ್ಟಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಅಶೋಕ್ ಗಸ್ತಿ ಅವರ ಪತ್ನಿಗೆ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ವರದಿ- ವಿರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment