ಪ್ರತಿ ಹೋಬಳಿಯಲ್ಲೂ ಒಂದೊಂದು ಭತ್ತ ಖರೀದಿ ಕೇಂದ್ರ ತೆರೆಯಬೇಕು -ಡಾ.ಕೆ ಅನ್ನದಾನಿ

ಮಳವಳ್ಳಿ: ರೈತರು ಭತ್ತದ ಮಾರಾಟ ಮಾಡಲು ಪ್ರತಿ ಹೋಬಳಿಯಲ್ಲೂ ಒಂದೊಂದು ಭತ್ತ ಖರೀದಿ ಕೇಂದ್ರವನ್ನು ತೆರೆಯುವಂತೆ ಶಾಸಕ ಡಾ.ಕೆ ಅನ್ನದಾನಿರವರು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲ್ಲೂಕಿನ ಬಿಜಿಪುರ ಹೋಬಳಿ ಕಾವೇರಿ ನದಿ ತೀರ ಪ್ರದೇಶವಾಗಿದ್ದು ಅಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದು,ಇನ್ನೂ ಕಿರುಗಾವಲು .ಕಸಬಾ ಹೋಬಳಿ ಯ ಯತ್ತಃಬಾಡಿ ಗ್ರಾಮದ ಕೊನೆಭಾಗದವರೆಗೂ ಭತ್ತ ಬೆಳೆಯುತ್ತಾರೆ ತಾಲ್ಲೂಕಿನಲ್ಲಿ ಕನಿಷ್ಠ. 4 ಭತ್ತ ಮಾರಾಟ ಕೇಂದ್ರ ತೆರೆಯಬೇಕು , ಇದಲ್ಲದೆ ಭತ್ತಕ್ಕೆ ರೋಗ ಬಾರದಂತೆ ಔಷದಿ ಸಿಂಪಡಿಸುವ ವ್ಯವಸ್ಥೆ ಯನ್ನು ರೈತರಿಗೆ ಮಾಡಬೇಕು ಎಂದರು. ಇಂದಿನಿಂದ ಬೆಳಿಗ್ಗೆಯಿಂದ ಮಧ್ಯಾಹ್ನ ದವರೆಗೂ ಫೀಲ್ಡ್ ವಕ್೯ ಮಾಡಿ ಕಚೇರಿಯಲ್ಲಿ ಕುಳಿತುಕೊಳ್ಳಬೇಡಿ ಎಂದು ಎಚ್ಚರಿಸಿದರು. ಸಭೆಯಲ್ಲಿ ತಹಸೀಲ್ದಾರ್ ಚಂದ್ರಮೌಳಿ. ತಾ.ಪಂ ಇಓ ಸತೀಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವರದಿ -ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment