ನಿಸ್ವಾರ್ಥ ಸೇವೆಗೆ ಹರಸಿ ಬಂದ ಕಲ್ಯಾಣ ಕರ್ನಾಟಕ ರತ್ನ..!

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಸರಕಾರಿ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಕನ್ನಡಮ್ಮನಿಗೆ ನುಡಿ ನಮನ ಸಮಾರಂಭದಲ್ಲಿ ಶ್ರೀ ಹಾಜಿಬಾಬ ಕರಡಕಲ್ ರವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿವ ಮೂಲಕ ಗೌರವಿಸಲಾಯಿತು. ಇನ್ನು ಸಮಾಜ ಸೇವೆಯಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿರುವ ಕನ್ನಡದ ಅಭಿಮಾನಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪ್ರಶಸ್ತಿ ವಿತರಿಸಲಾಯಿತು. ಈ ಹಿಂದೆಯೇ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹೆಸರು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹಾಜಿಬಾಬ ಕರಡಕಲ್ ನನ್ನ ಮುಂದಿನ ಜೀವನವೇಲ್ಲ ಬಡವರ , ದಿನ ದಲಿತರ, ನಿರ್ಗತಿಕರ , ಅಸಹಾಯಕರ ಸೇವೆಯಲ್ಲಿ ಮೂಡಿಪಾಗಿಡುತ್ತೇನೆ. ನೊಂದವರ ಪಾಲಿನ ಆಶಾಕಿರಣವಾಗಿ ಸೇವೆ ಮಾಡುವುದು ನನ್ನ ಭಾಗ್ಯ ಎಂದಿದ್ದಾರೆ .

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Please follow and like us:

Related posts

Leave a Comment