ಹೈದರಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ..!

ಸಿಂಧನೂರನ: ಸಿಂಧನೂರಿನ ಬಡಿಬೇಸ್ ಕಾಲೋನಿಯಲ್ಲಿ ಹೈದರಲಿ ಟಿಪ್ಪು ಸುಲ್ತಾನ್ ನಾಮಫಲಕ್ಕೆ ಪೂಜೆ ಸಲ್ಲಿಸುವ ಮೂಲಕ ಟಿಪ್ಪು ಸುಲ್ತಾನ್ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಜೆಡಿಎಸ್ ಪಕ್ಷದ ಯುವ ಮುಖಂಡ ಚಂದ್ರುಭೂಪಾಲ ನಾಡಗೌಡ ಮಾತನಾಡಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ಮೊಟ್ಟ ಮೊದಲ ಧೀರ ಅವರ ತಂದೆಯೂ ಸಹ ಸ್ವಾತಂತ್ರ್ಯ ಹೋರಾಟಗಾರ ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ ಎಂಬುದಕ್ಕೆ ಟಿಪ್ಪುಸುಲ್ತಾನ್ ಮೂಲ ಸಾಕ್ಷಿ ಎಂದು ಹೇಳಿದರು. ಇನ್ನು ಪ್ರಗತಿಪರ ಮುಖಂಡ ಎಚ್ ಎನ್ ಬಡಿಗೇರ ಮಾತನಾಡಿ ಅಪ್ಪಟ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿ ಯನ್ನು ಆಚರಿಸಲು ವಿರೋಧಿಸುವವರು ಒಮ್ಮೆ ಅವರ ಜೀವನ ಚರಿತ್ರೆ ಸ್ವತಂತ್ರ ಭಾರತಕ್ಕಾಗಿ ಮಾಡಿದ ಹೋರಾಟದ ಬಗ್ಗೆ ತಿಳಿದುಕೊಂಡು ಅವರು ನಡೆದುಕೊಂಡ ಬಂದ ಹಾದಿಯಲ್ಲಿ ಇಂದಿನ ಯುವಪೀಳಿಗೆ ನಡೆಯಲು ಸೂಚಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ.ನಗರಸಭೆಯ ಅಧ್ಯಕ್ಷ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಉಪಾಧ್ಯಕ್ಷರಾದ ಮುರ್ತುಜಾಸಾಬ್ ನಗರಸಭೆ ಸದಸ್ಯರಾದ ಜಿಲಾನಿಸಾಬ್ ಮುನೀರ್ ಪಾಷಾ ಅಲಿಯಾಸ್ ಛತ್ರಪ್ಪ ಹಾಗೂ ಟಿಪ್ಪು ಸುಲ್ತಾನ್ ಯುವಕ ಮಂಡಳಿ ಎಲ್ಲಾ ಸಮಾಜದ ಬಾಂಧವರು ಭಾಗವಹಿಸಿದ್ದರು

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment