ಡಾ. ರಾಜ್ ಕುಮಾರ್ ರವರ ಕುರಿತ ಪಂಚಪತಿ ಪುಸ್ತಕ ಬಿಡುಗಡೆ..!

ತಿಪಟೂರು: ಸ್ನೇಹ ಬುಕ್ ಹೌಸ್ ಹೊರತಂದಿರುವ ‘ಮಂಜುನಾಥ್ ಹಾಲುವಾಗಿಲು ವಿರಚಿತ ರಾಜಕುಮಾರ ಪಂಚಪದಿ’ ಎಂಬ ಪುಸ್ತಕವನ್ನು ತಿಪಟೂರಿನ ಡಾ.ರಾಜಕುಮಾರ್ ಬಾಲ್ಯದ ಗೆಳೆಯ ತಿಪಟೂರು ರಾಮಸ್ವಾಮಿಯರವರಿಂದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ತಿಪಟೂರು ರಾಮಸ್ವಾಮಿ ಹಾಗೂ ದಂಪತಿಗಳು ಪುಸ್ತಕಕ್ಕೆ ಪೂಜೆ ಸಲ್ಲಿಸಿ ಆ ಮೂಲಕ ಪುಸ್ತಕವನ್ನು ಭಕ್ತಿ ಪೂರ್ವಕವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಇನ್ನೂ ಈ ವೇಳೆ ಮಾತನಾಡಿದ ಅವರು ರಾಜಕುಮಾರ್ ನನ್ನ ಬಾಲ್ಯದ ಗೆಳೆಯ ಆತನ ಜೊತೆಯಿದ್ದ ನೆನಪುಗಳು ಇಂದೂ ಕೂಡ ನನ್ನ ಮನಸ್ಸಿನಲ್ಲಿ ಬೇರೂರಿದ್ದು ನಾನು ಸಾಯುವವರೆಗೂ ನನ್ನ ಗೆಳೆಯನನ್ನು ನೆನೆಯದ ದಿನಗಳೇ ಇಲ್ಲ ಎಂದು ಭಾವುಕರಾದರು. ಈ ಪುಸ್ತಕದಲ್ಲಿ ರಾಜ್ ಕುಮಾರ್ ಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಬರೆಯಲಾಗಿದ್ದು ಸಾರ್ವಜನಿಕರು ಈ ಪುಸ್ತಕವನ್ನು ಇಂದಿನಿಂದ ಪುಸ್ತಕ ಮಳಿಗೆಗಳಲ್ಲಿ ಪಡೆದು ರಾಜಕುಮಾರರ ಜೀವನ ಚರಿತ್ರೆಯನ್ನು ತಿಳಿಯಲು ಸಹಾಯಕವಾಗುತ್ತದೆ ಎಂದು ಈ ವೇಳೆ ತಿಳಿಸಿದರು.

Please follow and like us:

Related posts

Leave a Comment