ಕ್ಲಾಸ್ ರೂಂನಲ್ಲೇ ವಿವಾಹವಾದ ಅಪ್ರಾಪ್ತರು…

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನ ಕ್ಲಾಸ್ ರೂಮ್ ನಲ್ಲೇ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿತ್ತು.ಅಪ್ರಾಪ್ತ ವಿದ್ಯಾರ್ಥಿಗಳು ವಿವಾಹವಾಗಿರುವ ದೃಶ್ಯ ಸಾಮಾಜಿಕ ತಾಣಾದಲ್ಲಿ ವೈರಲ್ ಆಗಿದೆ.ಕಾಲೇಜು ಪ್ರಾಂಶುಪಾಲರಿಗೆ ಈ ವಿಷಯ ತಿಳಿದಾಗ ಇಬ್ಬರಿಗೂ ಟಿಸಿ ನೀಡಿ ಮನೆಗೆ ಕಳಿಸಿದ್ದಾರೆ.ಇತ್ತ ಈ ವಿವಾಹವಾಗಿರುವ ವಿಷಯ ವೈರಲ್ ಆಗುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರಿಗೆ ಸಹ ಆಘಾತವಾಗಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment