ಅರಿವಿನ ಅಂಬರ ಅಂಬೇಡ್ಕರ್ ಗಜಲ್ ಕೃತಿ ಲೋಕಾರ್ಪಣೆ..!

ರಾಯಚೂರು: ಯುವ ಗಜಲ್ ಕವಿ ಈರಣ್ಣ ಬೆಂಗಾಲಿ ಅವರ ಅರಿವಿನ ಅಂಬರ ಅಂಬೇಡ್ಕರ್ ಗಜಲ್ ಕೃತಿಯನ್ನು ಡಿ.12ರಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಿಖರಮಠ ಅವರು ಹೇಳಿದರು. ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ,ಡಿ.12 ರಂದು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ 10.45 ಕ್ಕೆ ಯುವ ಗಜಲ್ ಕವಿ ಈರಣ್ಣ ಬೆಂಗಾಲಿ ಅವರ ಅರಿವಿನ ಅಂಬರ ಅಂಬೇಡ್ಕರ್ ಗಜಲ್ ಸಂಪುಟ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಅಮ್ಮಿಕೊಳ್ಳಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಸಭೆ ಸದಸ್ಯರಾದ ಸಾಜೀದ್ ಸಮೀರ್ ಉದ್ಘಾಟಿಸಲಿದ್ದಾರೆ,ಕೃತಿ ಲೋಕಾರ್ಪಣೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ ಅವರು ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್,ಪ್ರಜಕವಿ ಅಂಬಣ್ಣ ಆರೋಲಿ, ವೀರಹನುಮನ,ಕೃತಿ ಪರಿಚಯವನ್ನು ಕಸಾಪ ಸದಸ್ಯರಾದ ಡಾ.ಶರಭೇಂದ್ರ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಕಸಾಪ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ,ಉಪಸ್ಥಿತಿಯನ್ನು ಕೃತಿ ಕರ್ತೃ ಈರಣ್ಣ ಬೆಂಗಾಲಿ ವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಮಸುಂದರ್,ರಾಮಣ್ಣಭೋವಿರ,ಅರುಣಾ ಹಿರೇಮಠ,ಬಿ. ವಿಜಯರಾಜೇಂದ್ರ,ಅಕ್ಕಮಹಾದೇವಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ವರದಿ- ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು.

Please follow and like us:

Related posts

Leave a Comment