ಮತ ಎಣಿಕೆಯ ಹಿನ್ನಲೆಯಲ್ಲಿ ಆನೇಕಲ್ ನಲ್ಲಿ 144 ಸೆಕ್ಷನ್ ಜಾರಿ..!

ಆನೇಕಲ್: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆಯ ಹಿನ್ನಲೆಯಲ್ಲಿ ಆನೇಕಲ್ ಪಟ್ಟಣದಲ್ಲಿ ಇಂದು 144 ಸೆಕ್ಷನ್ ಘೋಷಣೆ ಮಾಡಲಾಗಿತ್ತು.ನಿನ್ನೆ ರಾತ್ರಿ 12 ಗಂಟಿಯಿಂದ ಇಂದು ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಿ ಆನೇಕಲ್ ತಹಶೀಲ್ದಾರ್ ಮಹದೇವಯ್ಯ ಆದೇಶ ಹೊರಡಿಸಿದ್ದಾರೆ.ಇನ್ನೂ ಆನೇಕಲ್ ತಾಲ್ಲೂಕಿನಾದ್ಯಂತ 5 ಮಂದಿಗಿಂತ ಹೆಚ್ಚು ಮಂದಿ ಗುಂಪು ಸೇರುವ ಆಗಿಲ್ಲ ಎನ್ನಲಾಗಿತ್ತು.ಯಾವುದೇ ಸಂಭ್ರಮಾಚರಣೆಗಳು, ಸಂತೆ ಸಮಾರಂಭಗಳು ನಡೆಯುವ ಹಾಗಿಲ್ಲ.ಯಾರಾದ್ರೂ ಸಾವಿಗೀಡಾಗಿದ್ದರೆ 20ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಲು ನಿಷೇಧ ಮಾಡಲಾಗಿತ್ತು.ಯಾವುದೇ ಧಾರ್ಮಿಕ ಉತ್ಸವ ಮೆರವಣಿಗೆ ನಡೆಸುವ ಹಾಗಿಲ್ಲ.ಇನ್ನೂ ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಇದನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ಪೋಲೀಸರಿಗೆ ಸೂಚನೆ ನೀಡಲಾಗಿತ್ತು. ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More

ಆನೇಕಲ್ ನಲ್ಲಿ ಫ್ರೂಟ್ ಮಾರ್ಕೆಟ್ ಬಂದ್…!

ಆನೇಕಲ್: ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದಲ್ಲಿರುವ ಫ್ರೂಟ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿತ್ತು. 300 ರಿಂದ 400 ಅಂಗಡಿಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಹಣ್ಣುಗಳು ಬಂದು ಮಾರಾಟವಾಗುತ್ತವೆ, ಆದರೆ ಇಂದು ಸಂಪೂರ್ಣವಾಗಿ ಬಂದ್ ಆಗಿತ್ತು. ಆದ್ರೆ ಬೆಂಗಳೂರು- ಚೆನ್ನೈ ಹೆದ್ದಾರಿಯಲ್ಲಿ ಎಂದಿನಂತೆ ವಾಹನ ಸಂಚಾರ ಕಂಡು ಬಂತು. ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ಕೂಡ ಎಂದಿನಂತೆ ಸಂಚರಿಸಿದವು. ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More

ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಡಿವೈಎಸ್ಪಿ ಮಹಾದೇವಪ್ಪ..!

ಆನೇಕಲ್: ಆನೇಕಲ್ ಠಾಣೆಯಲ್ಲಿನ ಡಿವೈಎಸ್ಪಿ ಮಹದೇವಪ್ಪ ಸುಮಾರು 50ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗೆ ಕರೆಸಿ ಇನ್ಮುಂದೆ ಯಾರಾದ್ರೂ ರೌಡಿಸಂ ಮುಂದುವರಿಸಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ನಿಮ್ಮ ಆಟಗಳು ನನ್ನ ಮುಂದೆ ನಡೆಯೋದಿಲ್ಲ, ಬಾಲ ಮುದುರಿಕೊಂಡು ಕೆಲಸ ಮಾಡಿಕೊಂಡು ಮನೆಯಲ್ಲಿ ಇರಬೇಕು. ಆಟ ಆಡುತ್ತೇವೆ ಎಂದರೆ ನಮ್ಮ ಬಂದೂಕು ಕೆಲಸ ಮಾಡುತ್ತದೆ. ಬಾಲ ಬಿಚ್ಚಿದರೆ ಪೊಲೀಸ್ ಇಲಾಖೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಯಾವಾಗ ಬೇಕಾದರೂ ಮನೆಗೆ ನುಗ್ಗಿ ಹೊಡೆಯುತ್ತೇವೆ, ಮನೆಯಲ್ಲಿ ವೆಪನ್ ಇಟ್ಟುಕೊಂಡು ಆಟವಾಡಿದರೆ ಇನ್ನು ಮುಂದೆ ಎಚ್ಚರ, ಜೊತೆಗೆ ಬಡ್ಡಿ ದಂದೆಯಲ್ಲಿ ಪಾಲ್ಗೊಂಡಿದ್ದರೆ ಕೂಡಲೇ ದಂಧೇ ನಿಲ್ಲಿಸಬೇಕು. ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More

ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಫೇಸ್ ಬುಕ್ನಲ್ಲಿ ಖದೀಮರಿಂದ ಹಣಕ್ಕೆ ಬೇಡಿಕೆ..!

ಆನೇಕಲ್ : ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಓ ರಮೇಶ್ರವರು ಆನೇಕಲ್ನಲ್ಲಿ ಕೆಲಸ ಮಾಡಿ ಇದೀಗ ವರ್ಗಾವಣೆಯಾಗಿದ್ದರು. ಬಿಇಓ ರಮೇಶ್ ಅವರ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಖದೀಮರು ಕೆಲವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಲದಿನಗಳ ಹಿಂದೆ ಪೋಲಿಸ್ ಅಧಿಕಾರಿಯೊಬ್ಬರಿಗೆ ಇದೇ ರೀತಿ ವಂಚನೆ ಮಾಡಿದ್ದ ಖದೀಮರು ಇದೀಗ ರಮೇಶ್ ಅವರನ್ನು ಟಾರ್ಗೆಟ್ ಮಾಡಿದ್ದರು. ರಮೇಶ್ ರವರ ಪೊಟೋ ಹಾಗು ಡಿಟೇಲ್ಸ್ ಫೇಸ್ ಬುಕ್ನಲ್ಲಿ ಬಳಸಿ ವಂಚಿಸಿದ್ದಾರೆ. ಈಗಾಗಲೇ ಸ್ವೀಚ್ ಆಫ್ ಆಗಿರುವ ನಂಬರ್ ಗಳನ್ನು ಪೋನ್ ಪೇ ಹಾಗು ಗೂಗಲ್ಪೇಗೆ ಬಳಸಿ ವಿನಯ್ ಕುಮಾರ್ ಎಂಬುವವರ ಖಾತೆಗೆ ಹಣ ಜಮೆ ಮಾಡುವಂತೆ ಖದೀಮರು ಒತ್ತಾಯಿಸುತ್ತಿದ್ದರು. ಈ ಕುರಿತು ಬಿಇಓ ರಮೇಶ್ ಸೈಬರ್ ಕ್ರೈಂ ಗೆ ದೂರು ದಾಖಲಿಸಿದ್ದಾರೆ. ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More

ಕಾಲು ಜಾರಿ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು..!

ಆನೇಕಲ್: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲ್ಲೂಕಿನ ನಾಯನಹಳ್ಳಿಯಲ್ಲಿ ನಡೆದಿದೆ. 33 ವರ್ಷದ ಮುನಿರಾಜು ಎಂಬಾತ ವೆಂಕಟಾಚಲ ಗೌಡ ಎಂಬುವವರ ತೋಟದಲ್ಲಿ ತೋಟದ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಹೋದಾಗ ಈ ಘಟನೆ ಸಂಭವಿಸಿದ್ದು, ಈಜಲು ಬಾರದೆ ಕೃಷಿ ಹೊಂಡದಲ್ಲೇ ಬಿದ್ದು ಮೃತಪಟ್ಟಿದ್ದಾರೆ. ಬೆಳಗ್ಗೆ ದಿನನಿತ್ಯದ ಕೆಲಸಕ್ಕೆ ಸಾರ್ವಜನಿಕರು ತೆರಳಿದ್ದು ಮುನಿರಾಜುನ ಚಪ್ಪಳಿ ಹೊಂಡದ ಮೇಲೆ ಇರುವುದನ್ನು ಕಂಡು ಸ್ಥಳಿಯರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಕೃಷಿ ಹೊಂಡದಲ್ಲಿನ ನೀರು ಖಾಲಿ ಮಾಡಿ ಮೃತ ದೇಹವನ್ನು ಹೊರತೆಗೆದು ಶವಾಗಾರಕ್ಕೆ ಕಳುಹಿಸಿದ್ದಾರೆ. ಬೆಳಿಗ್ಗೆ ಚಪ್ಪಲಿ ಕೃಷಿ ಹೊಂಡದ ಮೇಲೆ ಇರುವುದು ನೋಡಿ ಘಟನೆ ಬೆಳಕಿಗೆ. ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More

ಕುಡಿದು ವಾಹನ ಚಾಲನೆ- ಸರಣಿ ಅಪಘಾತ..!

ಆನೇಕಲ್: ಲಾರಿ ಚಾಲಕ ಕುಡಿದು ವಾಹನ ಚಾಲನೆ ಮಾಡಿದ ಪರಿಣಾಮ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಅತ್ತಿಬೆಲೆ ಟೋಲ್ ಬಳಿ ನಡೆದಿದೆ.ತಮಿಳುನಾಡಿನ ಹೊಸೂರು ಕಡೆಯಿಂದ ಬೆಂಗಳೂರು ಕಡೆಯ ಮಾರ್ಗವಾಗಿ ಬರುವಾಗ ಅತ್ತಿಬೆಲೆಯ ಟೋಲ್ ಬಳಿ ಸಾಲಿನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು ಮುಂಭಾಗದಲ್ಲಿದ್ದ ಏಳು ಕಾರುಗಳು ಸಂಪೂರ್ಣ ಜಖಂ ಗೊಂಡಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೂ ಸರಣಿ ಅಪಘಾತಕ್ಕೆ ಲಾರಿ ಚಾಲಕ ಮದ್ಯ ಸೇವಿಸಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಅಪಘಾತದಿಂದ ಕೆಲ ಕಾಲ ಅತ್ತಿಬೆಲೆ ಟೋಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅತ್ತಿಬೆಲೆ ಪೋಲಿಸರು ಅಪಘಾತವಾಗಿದ್ದ ವಾಹನಗಳನ್ನು ಟೋಲ್ ರಸ್ತೆಯಿಂದ ತೆರವು ಗೊಳಿಸಿ ವಾಹನ ಸವಾರರಿಗೆ…

Read More

ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ ರಾಮಲಿಂಗರೆಡ್ಡಿ..!

ಆನೇಕಲ್: ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಕೇಸ್ ದಾಖಲಾದ ಹಿನ್ನೆಲೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ. ಸಣ್ಣ-ಪುಟ್ಟ ವಿಚಾರಕ್ಕೆ ಕೇಸು ದಾಖಲಿಸುವುದು ಸರಿಯಲ್ಲ, ಚಾಲಕನಿಗೆ ಗೊತ್ತಾಗದೆ 100ಮೀಟರ್ ಒಳಗೆ ಹೋಗಿದ್ದಾರೆ ಅಷ್ಟೇ ಇನ್ನು ಮುಂದೆ ಈ ರೀತಿ ಮಾಡಬೇಡಿ ಅಂತಾ ಪೊಲೀಸರು ಹೇಳಿದರೆ ಮುಗಿದು ಹೋಗುತ್ತಿತ್ತು. ಚಿಕ್ಕ ವಿಷಯವನ್ನು ದೊಡ್ಡದನ್ನಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಡಿಜೆ ಹಳ್ಳಿ ಕೆಜಿಹಳ್ಳಿ ಗಲಾಟೆ ವಿಚಾರ ಪೊಲೀಸರು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಗಲಾಟೆಗೆ ಕಾರಣ. ಸರ್ಕಾರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಸಂಪತ್ ರಾಜ್ ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲಿ. ನವೀನ್ ನನ್ನು ಕೂಡಲೇ ಬಂಧಿಸಿದ್ದರು ಕೂಡ ಈ ಗಲಾಟೆ ಆಗುತ್ತಿರಲಿಲ್ಲ. ಆರ್ ಆರ್ ನಗರ ಚುನಾವಣೆಗೆ ಒಂದು ವಾರ್ಡಿಗೆ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಕೂಡ ನೇಮಕ ಮಾಡಲಾಗಿದೆ. ಅವರು ಕೂಡ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದು ಗುಡುಗಿದರು.…

Read More

ಕ್ಯಾಟ್ ಫಿಶ್ ಸಾಕಾಣೆ ಮಾಡುತ್ತಿದ್ದ ಆರೋಪಿ ವಶ..!

ಆನೇಕಲ್: ನಿಷೇಧಿತ ಕ್ಯಾಟ್ ಫಿಶ್ ಸಾಕಾಣೆ ಮಾಡುತ್ತಿದ್ದ ಹೊಂಡಗಳ ಮೇಲೆ ಅತ್ತಿಬೆಲೆ ಪೊಲೀಸರು ಹಾಗೂ ಆರ್ಐ ಅಧಿಕಾರಿಗಳು ದಾಳಿ ನಡೆಸಿದ್ದು, ಮೂರು ಬೃಹತ್ ಹೊಂಡಗಳಲ್ಲಿ ಆಫ್ರಿಕನ್ ಕ್ಯಾಟ್ ಪಿಶ್ ಸಾಕಣೆ ಮಾಡುತ್ತಿದ್ದ ವೆಂಕಟೇಶ್ ಎಂಬಾತನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಅತ್ತಿಬೆಲೆ ಪಿಎಸ್ಐ ಮುರುಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೂ ದಾಳಿ ನಡೆಸಿದ್ದು ಸುಮಾರು 5 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಮೀನುಗಳ ಸಾಕಣೆಯನ್ನು ವಶಪಡಿಸಿಕೊಂಡಿದ್ದಾರೆ. ವರದಿ-ಕಾರ್ತಿಕ್ ಕ್ಸ್ ಪ್ರೆಸ್ ಟಿವಿ ಆನೇಕಲ್

Read More

ಜಗಳದಿಂದಾ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

ಆನೇಕಲ್ : ಜಗಳದಿಂದಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಯಾರಂಡಳ್ಳಿಯಲ್ಲಿ ನಡೆದಿದೆ. ನಿನ್ನೇ ಸಂಜೆ ವಿಕಾಸ್ ಹಾಗೂ ಪೀಟರ್ ನಡುವೆ ಜಗಳವಾಗಿದೆ, ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಲಿದ್ರೂ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ತೀವ್ರ ವಿಕೋಪಕ್ಕೆ ತಿರುಗಿ ಕೊಪದಲ್ಲಿದ್ದ ಪೀಟರ್ ವಿಕಾಸ್ ಗೆ ತನ್ನ ಬಳಿಯಿದ್ದ ಚೂಪಾದ ಚಾಕುವಿನಿಂದ ಕುತ್ತಿಗೆಯ ಭಾಗಕ್ಕೆ ಇರಿದಿದ್ದಾನೆ,ವಿಕಾಸ್ ತೀವ್ರವಾದ ರಕ್ತಸ್ರಾವದಿಂದ ನೆಲಕ್ಕುರುಳಿ ಸಾವನ್ನಪ್ಪಿದ್ದಾನೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೂರ್ಯ ಸಿಟಿ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More

ಜಿಗಣಿಯ ಮೀನಾಕ್ಷಿ ರೆಸಾರ್ಟ್ ಬಳಿ ಗಾಂಜಾ ಜಪ್ತಿ-ಇಬ್ಬರು ಆರೋಪಿಗಳ ಬಂಧನ..!

ಆನೇಕಲ್: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಕೃಷ್ಣ ಗಿರಿ ಮೂಲದ ಮುನಿರಾಜು ಅಲಿಯಾಸ್ ಸಿನ್ನಬ್ಬಯ್ಯ ಮತ್ತು ಅಸ್ಸಾಂ ಮೂಲದ ಧೀರೇನ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಸುಮಾರು 10 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಸಂಜೆ ಜಿಗಣಿಯ ಮೀನಾಕ್ಷಿ ರೆಸಾರ್ಟ್ ಬಳಿ ಗಾಂಜಾ ಮಾರಾಟ ಆಗುತ್ತಿದೆ ಎಂಬಾ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಯಿತು.ಈ ವೇಳೆ ಒಬ್ಬ ಆರೋಪಿ ಪೋಲಿಸರಿಂದ ಎಸ್ಕೇಪ್ ಆಗಿದ್ದು ಇನ್ನುಳಿದ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Read More