ಲಂಡನ್ ನ ಮೈಸೂರು ರಸ್ತೆಯಲ್ಲಿ ನಡೆದಾಡಿದ ಯದುವೀರ್-ತ್ರಿಷಿಕಾ

ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರದಂದು ಲಂಡನ್ ನಲ್ಲಿ ಇರುವ ಬಸವೇಶ್ವರ ವಿಗ್ರಹಕ್ಕೆ ಗೌರವ ಸಲ್ಲಿಸಿದರು.ಲಂಡನ್ ನಲ್ಲಿ ಇರುವ ಮೈಸೂರ ರಸ್ತೆಯಲ್ಲಿ ಇಬ್ಬರೂ ನಡೆದಾಡಿದರು. ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಬ್ರಿಟಿಷ್ ಮೈಸೂರು ರೆಜಿಮೆಂಟ್ ನ ನೇಮಕಾತಿ ಕೇಂದ್ರ ಇದೇ ಸ್ಥಳದಲ್ಲಿತ್ತು. ಆದ್ದರಿಂದ ಮೈಸೂರು ರಸ್ತೆ ಎಂದೇ ಹೆಸರಾಗಿದೆ.ಯದುವೀರ್ ಅವರ ಜತೆಗೆ ಪತ್ನಿ ತ್ರಿಷಿಕಾ ಒಡೆಯರ್ ಕೂಡ ಇದ್ದರು. ಲಂಡನ್ ನ ಬರೋ ಆಫ್ ಲಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಬ್ರಿಟಿಷ್ ಭಾರತೀಯ/ಕನ್ನಡ ಸಮುದಾಯ ಹಾಗೂ ಯುನೈಟೆಡ್ ಕಿಂಗ್ ಡಮ್ ಬಸವ ಸಮಿತಿ ಅಧ್ಯಕ್ಷ ಅಭಿಜಿತ್ ಸಾಲಿಮಠ್ ಭಾಗವಹಿಸಿದ್ದರು

Read More

ಭಾರತದ ದೊಡ್ಡ ಮೌಲ್ಯದ ಕರೆನ್ಸಿಗಳನ್ನು ನಿಷೇಧಿಸಿದ ನೇಪಾಳ

ಕಠ್ಮಂಡು, ಡಿಸೆಂಬರ್ 14: ಭಾರತದ ನೆರೆ ರಾಷ್ಟ್ರ ನೇಪಾಳದ ಸರ್ಕಾರವು, ಭಾರತದ 2000, 500 ಹಾಗೂ 200 ರೂ. ನೋಟುಗಳ ಚಲಾವಣೆ ಮೇಲೆ ನಿಷೇಧ ಹೇರಿದೆ. ನೇಪಾಳಕ್ಕೆ ಬರುವ ಪ್ರವಾಸಿಗರ ಪೈಕಿ ಭಾರತೀಯರೇ ಅತಿ ಹೆಚ್ಚು ಎಂಬ ಅಂಕಿ ಅಂಶ ಹೊರ ಬಂದರೂ ಇಂಥ ಆದೇಶ ಬಂದಿದೆ. ಈ ನಿರ್ಧಾರದಿಂದ ಭಾರತೀಯ ಪ್ರವಾಸಿಗರಿಗೆ ಆಘಾತವನ್ನುಂಟು ಮಾಡಿದೆ. ನೇಪಾಳದಲ್ಲಿ ಭಾರತೀಯ ನೋಟುಗಳ ಚಲಾವಣೆಗೆ ಮಾನ್ಯತೆಯಿದೆ. ಆದರೆ, ಕಳೆದ ಎರಡು ವರ್ಷಗಳ ಹಿಂದೆ 1000 ಹಾಗೂ 500 ರೂಪಾಯಿ ನೋಟುಗಳ ಚಲಾವಣೆಯನ್ನು ನಿಷೇಧಿಸಿ, ಮೋದಿ ಸರ್ಕಾರವು ನೋಟ್ ಬ್ಯಾನ್ ಜಾರಿಗೊಳಿಸಿತ್ತು.

Read More

ಡಿ.22-23ರಂದು ಬೈಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು: ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ನಲ್ಲಿ ಬಿರುಕು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ, ಬಿಎಂಆರ‍್ಸಿ ಎಂಡಿ ಆಜಯ್ ಸೇಠ್ ಅವರು, ಶುಕ್ರವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಬೆಂಗಳೂರಿನ ಎಂ.ಜಿರಸ್ತೆ ಬೈಯಪ್ಪನಹಳ್ಳಿ ಮೆಟ್ರೋ ಸಂಚಾರ ಡಿ.22-23 ಸ್ಥಗಿತವಾಗಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಘಟನೆಗೆ ಸಂಬಂಧಪಟ್ಟಂತೆ ದೆಹಲಿ ಟೀಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ವಿವರವಾದ ಪ್ರಾಜೆಕ್ಟ್ ರಿಪೋರ್ಟ್ ಸಿದ್ದ ಮಾಡಿಕೊಡುವ ಬಗ್ಗೆ ದೆಹಲಿ ಟೀಮ್ ನಿಂದ ಸಲಹೆ ಪಡೆಯಲಾಗಿದ್ದು, ಮುಂದಿನ ದಿವಸದಿಂದ ನಮ್ಮ ತಂಡ ದೆಹಲಿ ತಂಡದೊಂದಿಗೆ ಸಂಪರ್ಕದಲ್ಲಿ ಇರುತ್ತದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಂಡು ಮೆಟ್ರೋ ರೇಲ್ ಅನ್ನು ರನ್ ಮಾಡಲಾಗುತ್ತಿದೆ ಎಂದು ಹೇಳಿದರು.

Read More

ಸರಳ ಜೀವನ ಉದಾತ್ತ ಚಿಂತಕ ಶಿವಾಜಿ ಛೆತ್ರಪ್ಪ ಕಾಗಣೀಕರ

ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಯಕರು, ಬಿಳಿ ಕಾಲರ್ ಅಧಿಕಾರಿಗಳಂತಹ ಹೈಫೈ ಮಂದಿಯೇ ಕುಳಿತುಕೊಂಡು ಸಭೆ ನಡೆಸುವ ವಿಧಾನಸೌಧದ ಮೂರನೇ ಮಹಡಿಯ ವೈಭವೋಪೇತ ಸಮ್ಮೇಳನ ಸಭಾಂಗಣ (ಕಾನ್ಫರೆನ್ಸ್ ಹಾಲ್ ಕೊಠಡಿ 334) ಡಿಸೆಂಬರ್ 5ರ ಬುಧವಾರ ಇಡೀ ತನ್ನ ಇತಿಹಾಸದಲ್ಲೇ ಅಪರೂಪದ ಅತಿಥಿಯೊಬ್ಬರಿಗೆ ಸಾಕ್ಷಿ ಯಾಗಿತ್ತು. ಚಡ್ಡಿ ಅಂಗಿ ಧರಿಸಿದ್ದ ಆ ವ್ಯಕ್ತಿ ತಲೆ ಮೇಲೊಂದು ಸಣ್ಣ ಟೋಪಿ ಧರಿಸಿ ಹೆಗಲಿಗೊಂದು ಕೈಚೀಲ ಹಾಕಿದ್ದರು. ಅವರ ಪಕ್ಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು, ಹಿರಿಯ ಅಧಿಕಾರಿಗಳು ಇದ್ದರೂ ಆ ವ್ಯಕ್ತಿಯಷ್ಟು ಯಾರೂ ದೊಡ್ಡವರಾಗಿ ಕಾಣಲಿಲ್ಲ. ಆ ವ್ಯಕ್ತಿಯಲ್ಲಿದ್ದಷ್ಟು ತೇಜಸ್ಸು, ಜೀವನೋತ್ಸಾಹ, ಅದಮ್ಯ ನಿಸ್ವಾರ್ಥ ಸೇವಾ ಮನೋಭಾವ ಅಲ್ಲಿದ್ದ ಯಾರ ಮುಖದಲ್ಲೂ ಕಾಣಲಿಲ್ಲ. ಆ ಅಪರೂಪದ ವ್ಯಕ್ತಿ ಮತ್ತಾರು ಅಲ್ಲ, ಬೆಳಗಾವಿ ಜಿಲ್ಲೆಯ ಶಿವಾಜಿ ಛೆತ್ರಪ್ಪ ಕಾಗಣೀಕರ ಅವರು. ಅವರಿಗೆ ಈ ವರ್ಷದ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಅವರ…

Read More

ಕತ್ತೆ ಹಾಲು ಮಾರುವ ಸರೋಜಮ್ಮ ಹೇಳಿಕೊಂಡ ಅನ್ನ ನೀಡುವ ‘ಲಕ್ಷ್ಮಿ’ಯ ಕಥೆ

ಯಾವತ್ತಿಗೂ ಮತ್ತೊಬ್ಬ ಮನುಷ್ಯರ ಬದುಕೇ ಬಹಳ ಆಸಕ್ತಿಕರ. ಅದೇನೇ ಇಂಟರ್ ನೆಟ್, ಫೇಸ್ ಬುಕ್ ಮತ್ತೊಂದು ಬಂದು ಜಗತ್ತು ಬದಲಾಗಿ ಹೋದರೂ ನನ್ನಂಥ ಹಳ್ಳಿ ಮನುಷ್ಯನಿಗೆ ಮತ್ತೊಬ್ಬ ವ್ಯಕ್ತಿಯ ಬದುಕು, ಜನಪದ, ಸಾಹಿತ್ಯದಷ್ಟು ಆಪ್ಯಾಯಮಾನವಾಗಿ ಇನ್ನೇನೂ ಕಾಣುವುದಿಲ್ಲ. ಅಲ್ಲಿ ಇಲ್ಲಿ ಎಂದು ಅಲೆದಾಡುವ ಜಾಯಮಾನದವನಾದ ನಾನು ಹೀಗೆ ಸುತ್ತಾಟ ನಡೆಸಿದ್ದೆ. ಯಾವಾಗಲೂ ಹಸು-ಎಮ್ಮೆಗಳನ್ನು ಮೇಯಿಸಿಕೊಂಡು ಹೋಗುವವರನ್ನೇ ನೋಡಿ ರೂಢಿ ಆಗಿಹೋಗಿದೆ. ಅಂಥದ್ದರಲ್ಲಿ ಯಲ್ದೂರಿನ ಹತ್ತಿರ ಒಬ್ಬ ಹೆಂಗಸು ಐದು ಕತ್ತೆಗಳ ಜತೆಗೆ ನಡೆದು ಹೋಗುತ್ತಾ ಇರುವುದು ಕಾಣಿಸಿತು. ಆಕೆಯನ್ನು ನೋಡಿದ ಮೇಲೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮನಸ್ಸಾಗದೇ, ಅಲ್ಲೇ ಗಾಡಿ ನಿಲ್ಲಿಸಿ, ಹಾಗೇ ಮಾತಿಗೆ ಎಳೆದೆ.

Read More

ಹುಟ್ಟೂರು ನನ್ನ ಬಾ ಎಂದು ಕರೆಯುತ್ತಿದೆ, ವಾಪಸ್ ಬರುತ್ತಿದ್ದೇನೆ!

ಅಚಾನಕ್ಕಾಗಿ ಹೋದ ವಾರ ಬಾರ್ಸಿಲೋನಾದ ಗೆಳೆಯರಿಂದ ಕರೆ ಬಂದಿತ್ತು. “ಗುರುದ್ವಾರದಲ್ಲಿ ಊಟ ಮಾಡುತ್ತಿದ್ದೇವೆ, ನೀನು ತೋರಿಸಿಕೊಟ್ಟಿದ್ದು ಒಳ್ಳೆದಾಯ್ತು” ಎಂದು. ಒಂದು ವರ್ಷದ ಹಿಂದೆ ಒಂದಷ್ಟು ಜನ ಗುಂಪು ಕಟ್ಟಿಕೊಂಡು ಪರೀಕ್ಷೆಯ ಸಮಯದಲ್ಲಿ ಅಡುಗೆ ಮಾಡಿಕೊಳ್ಳಲು ಬಿಡುವಿಲ್ಲದೆ, ಹೋಟೆಲಿಗೆ ದುಡ್ಡಿಲ್ಲದೆ ನಾವು ಹೊಕ್ಕಿದ್ದು ಗುರುದ್ವಾರ. ಬಾರ್ಸಿಲೋನಾದಲ್ಲಿ ಒಂದೇ ಇಸ್ಕಾನ್ ದೇವಾಲಯವಿರುವುದು. ಅಲ್ಲಿ ಫ್ರೀ ಊಟದ ವ್ಯವಸ್ಥೆ ಇಲ್ಲ. ಸೋ ನಾವೊಂದಷ್ಟು ಜನ ಭಾರತೀಯರು ಗುರುದ್ವಾರಕ್ಕೆ ಹೋದೆವು. ನಮ್ಮಂತೆ ಸುಮಾರು ಜನ ವಿದ್ಯಾರ್ಥಿಗಳು ಅಲ್ಲಿ ಬಂದಿದ್ದರು. ಎಲ್ಲರಿಗೂ ಖುಶಿಯಾಗಿ ಊಟ ಬಡಿಸಲಾಯಿತು. ನಮಗೆ ಪರೀಕ್ಷೆ ಎಂದು ಗೊತ್ತಾಗಿ ಮತ್ತೇನೋ ಮಂತ್ರ ಹೇಳಿ, ಆಶೀರ್ವಾದ ಮಾಡಿ ಕಳಿಸಿದರು.

Read More

ಮುರಳಿ ಉಗ್ರಂ ‘ದರ್ಶನ’ಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್

ಶ್ರೀಮುರಳಿ ಆಕ್ಟ್ ಮಾಡಿರೋ ‘ಉಗ್ರಂ’ ಸಿನಿಮಾ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಇದೇ ಫೆಬ್ರವರಿ 21ಕ್ಕೆ ಥಿಯೇಟರ್ ಗೆ ಲಗ್ಗೆ ಇಡಲಿರೋ ‘ಉಗ್ರಂ’ನ ಅಟ್ಟಹಾಸದ ಟ್ರೈಲರ್ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳನ್ನ ಹುಟ್ಟುಹಾಕಿತ್ತು. ‘ಉಗ್ರಂ’ ಟ್ರೇಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದ್ಸಾರಿ ಸಿನಿಮಾ ನೋಡ್ಬೇಕು ಅನ್ನೋ ನಿರೀಕ್ಷೆ ಇಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಸಿನಿಮಾ ಸಖತ್ ಥ್ರಿಲ್ಲಿಂಗ್ ಅನ್ನಿಸೋ ಅಂಶಗಳನ್ನ ತನ್ನೊಳಗೇ ಬಚ್ಚಿಟ್ಟುಕೊಂಡಿದೆ. ಇದು ಭೂಗತಲೋಕದ ರಿಯಲ್ ಸ್ಟೋರಿಗಳಿಗೆ ಹಿಡಿದಿರೋ ಕನ್ನಡಿ. ಚಿತ್ರಕ್ಕೆ ರಾಮ್ ಲೀಲಾದಂತಹಾ ಸಿನಿಮಾಗೆ ಸಿನಿಮಾಟೋಗ್ರಫರ್ ಆಗಿದ್ದ ರವಿವರ್ಮನ್ ಅವರ ಕ್ಯಾಮೆರಾ ಕಮಾಲ್ ಇದೆ.

Read More

ಯಶ್ ಗೆ ‘ಗುಡ್ ಲಕ್’ ಹೇಳಿದ ಶಾರೂಖ್ ಕೆಜಿಎಫ್ ಬಗ್ಗೆ ಏನಂದ್ರು?

‘ಕೆಜಿಎಫ್’ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗ್ತಿರುವುದು ಬಾಲಿವುಡ್ ನಲ್ಲಿ ತೀರಾ ಕುತೂಹಲ ಮೂಡಿಸಿದೆ. ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅಭಿನಯದ ‘ಜೀರೋ’ ಸಿನಿಮಾ ಬರ್ತಿರುವುದು ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಮಧ್ಯೆ ಶಾರೂಖ್ ಸಿನಿಮಾದ ಎದುರು ಕನ್ನಡ ಸಿನಿಮಾ ಬರ್ತಿದೆ ಎಂದು ಕಾಲೆಳೆದವರು ಇದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಶ್, ಬಾಲಿವುಡ್ ಸಂದರ್ಶನಗಳಲ್ಲಿ ಶಾರೂಖ್ ಬಗ್ಗೆ ಮೆಚ್ಚುಗೆ ಮಾತುಗಳನ್ನೇ ಹೇಳುತ್ತಿದ್ದಾರೆ.

Read More

ನಂದಿಬೆಟ್ಟದಲ್ಲಿ ಐಂದ್ರಿತಾ-ದಿಗಂತ್‌ ಮದುವೆ

ಇಲ್ಲಿಯ ಖಾಸಗಿ ರೆಸಾರ್ಟ್‌ನಲ್ಲಿ ತಾರಾ ಜೋಡಿಯ ಸಂಭ್ರಮಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಸಿಂಪಲ್‌ ಆಗಿ ನಿಶ್ಚಿತಾರ್ಥ ಮುಗಿಸಿಕೊಂಡಿದ್ದ ಇವರು ಕುಟುಂಬ ಸದಸ್ಯರು ಹಾಗೂ ಗೆಳೆಯರ ಸಮ್ಮುಖದಲ್ಲಿ ಮದುವೆಯಾದರು. ಎರಡು ದಿನಗಳ ಮದುವೆಯ ವಿಧಿವಿಧಾನದ ಭಾಗವಾಗಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿತ್ತು. ಸಂಗೀತ ಕಾರ್ಯಕ್ರಮಗಳಲ್ಲಿ ಈ ನವ ಜೋಡಿ ನರ್ತಿಸುವುದರ ಮೂಲಕ ಸಂಭ್ರಮ ಹೆಚ್ಚಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವೀಡಿಯೋ ತುಣಕುಗಳು ಹಾಗೂ ಫೋಟೊಗಳು ವೈರಲ್‌ ಆಗಿದ್ದವು. ”ನಾನು ಯಾವತ್ತೂ ನಿನ್ನ ಹಿಂದೆ ಇರುತ್ತೇನೆ ಬೇಬಿ. ನೀನು ಉತ್ತಮ ಮಗಳು, ನಟಿ ಹಾಗೂ ಇಂದಿನಿಂದ ಅತ್ಯುತ್ತಮ ಪತ್ನಿಯಾಗಲಿದ್ದೀಯ. ಇಂದಿನವರೆಗೆ ನಾನು ನಿನ್ನ ಬಾಡಿಗಾರ್ಡ್‌ ಆಗಿದ್ದೆ. ಆದರೆ ಇಂದು ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸುತ್ತಿದ್ದೇನೆ,” ಎಂದು ನಟಿ ರಾಗಿಣಿ ಟ್ವೀಟ್‌ ಮಾಡಿದ್ದಾರೆ.

Read More

ಮಕರ ರಾಶಿಯವರಿಗೆ ಗುರು-ಶನಿ ನೀಡುತ್ತಿರುವ ಕೊನೆ ಅವಕಾಶ ಏನು ಗೊತ್ತೆ?

ಮಕರ ರಾಶಿಯವರಿಗೆ ಈಗೊಂದು ನೀತಿ ಪಾಠ ಹೇಳಿ, ಆ ನಂತರ ಲೇಖನ ಆರಂಭಿಸುತ್ತೇನೆ. ಇರುವೆಗಳು ಬೇಸಿಗೆಕಾಲದಲ್ಲಿ ಉಳಿದ ಕಾಲ, ಅಂದರೆ ಚಳಿ ಹಾಗೂ ಮಳೆಗಾಲಕ್ಕಿಂತ ಹೆಚ್ಚು ಶ್ರಮಪಟ್ಟು ಆಹಾರ ಸಂಗ್ರಹ ಮಾಡುತ್ತವೆ. ಏಕೆಂದರೆ, ಮುಂದಿನ ಕಾಲ ಅದೆಂಥ ಸನ್ನಿವೇಶ ಎದುರಾಗಬಹುದೋ ಗೊತ್ತಿಲ್ಲ. ದುಡಿಯುವ ಶಕ್ತಿ ಇದ್ದಾಗ, ಆಹಾರ ಕಣ್ಣಿಗೆ ಕಾಣುವಾಗ ಆಪತ್ಕಾಲಕ್ಕೆ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಕಳೆದ ಅಕ್ಟೋಬರ್ ಹನ್ನೊಂದನೇ ತಾರೀಕು ನಿಮ್ಮ ಜನ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತಿದೆ. ಹನ್ನೆರಡನೇ ಮನೆಯಲ್ಲಿ ನಿಮ್ಮದೇ ರಾಶ್ಯಾಧಿಪತಿ ಶನಿಯು ಸ್ಥಿತನಾಗಿದ್ದಾನೆ. ಈ ಎರಡು ಗ್ರಹದ ಫಲ ನಿಮ್ಮ ಪಾಲಿಗೆ ಹೇಗೆ ಸಿಗಬಹುದು. ಮುಂದಿನ ವರ್ಷದ ನವೆಂಬರ್ ಐದನೇ ತಾರೀಕಿನ ತನಕ ಗುರು ಅದೇ ಹನ್ನೊಂದನೇ ಮನೆಯಲ್ಲಿ ಇರುತ್ತದೆ.

Read More