ಕಳ್ಳಬಟ್ಟಿ ದಂಧೆೆಗೆ ರಾಯಚೂರಿನಲ್ಲಿ ಹೊಸ.. ಹೊಸ.. ಪ್ಲಾನ್..

ಲಿಂಗಸೂಗೂರು(ರಾಯಚೂರು): ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳ್ಳಬಟ್ಟಿ ದಂಧೆÉಗೆ ಹೊಸ ಹೊಸ ಪ್ಲಾನ್‌ಗಳನ್ನ ಮಾಡಿರೋದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಲವು ತಾಂಡಾಗಳಲ್ಲಿ ಬೆಳಕಿಗೆ ಬಂದಿದೆ.
ಅAದ ಹಾಗೇ ರಸ್ಮಿ ಹಾಗೂ ಬಗಡಿ ತಾಂಡಾಗಳಲ್ಲಿ ದಂಧೆಕೋರರು, ಮನೆಗಳಲ್ಲಿ ಮೊದಲು ಅಕ್ರಮವಾಗಿ ್ಲ ಕಳ್ಳಬಟ್ಟಿ ತಯಾರಿಸುತ್ತಾರೆ.
ಇನ್ನು ಕಳ್ಳಭಟ್ಟಿ ಸಿದ್ಧಪಡಿಸಿದ ಬಳಿಕ ಮತ್ತೇರುವಂತೆ ಮಾಡಲು ಅದನ್ನು ನೆಲೆ ಅಗೆದು ಬಚ್ಚಿಡುತ್ತಾರೆ.ಅಲ್ಲದೆ, ದಾಳಿ ವೇಳೆ ಅಬಕಾರಿ ಅಧಿಕಾರಿಗಳಿಗೆ ಯಾಮಾರಿಸಲು ತಾಂಡಾ ಜನರು ಇಂತಹ ಹೊಸ ಪ್ಲಾನ್ ಮಾಡಿದ್ದಾರೆನ್ನಲಾಗಿದೆ.
ಆದರೆ ಇದರ ಎಲ್ಲಾ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಮಾತ್ರ ಕಳೆದೆಡು ದಿನಗಳಿಂದ ಸತತವಾಗಿ ದಾಳಿ ಮಾಡಿ ಕಳ್ಳಬಟ್ಟಿ ವಶ ಪಡಿಸಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಕಳ್ಳಭಟ್ಟಿ ಕುಡಿಯಲು ತಾಲೂಕಿನ ಬೇರೆ ಬೇರೆ ಭಾಗದ ಜನ ನಿತ್ಯ ಬರುತ್ತಾರೆ..ಹೀಗಾಗಿ ಇದನ್ನೆ ಬಂಡವಾಳ ಮಾಡಿಕೊಂಡ ದಂಧೆಕೋರರು ಲಾಕ್ ಡೌನ್ ಇದ್ರು ಕ್ಯಾರೆ ಎನ್ನದೇ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದು,ಸದ್ಯ ಇದಕ್ಕೆ ಕಡಿವಾಣ ಹಾಕಲು ಅಬಕಾರಿ ಅಧಿಕಾರಿಗಳು ಮುದಗಲ್ ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment