ದೇಶಕ್ಕೆ ಕೊರೊನಾ ಚಿಂತೆ..ಗದಗದಲ್ಲಿ ಮಾತ್ರ ಕೆಲವರಿಗೆ ಇಸ್ಪೀಟ್ ಆಟ ಬೇಕಂತೆ..

ಗದಗ: ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಕೆಲ ಯುವಕರಿಗೆ ಬುದ್ದಿ ಬಂದಿಲ್ಲ ಅನ್ನಿಸುತ್ತೆ..ಯಾಕಂದ್ರೆ ಲಾಕ್‌ಡೌನ್ ಇದ್ದರೂ ಮನೆಯಲ್ಲಿ ಇರದೇ ಪುಂಡಾಟ ಮೆರೆಯುತ್ತಿರುವ ಈ ಯುವಕರು ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಶುರುವಿಟ್ಟುಕೊಂಡಿದ್ದಾರೆ. ಅ0ದ ಹಾಗೇ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಈ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊ0ಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ. ಇನ್ನು ಯಾರಾದರೂ ಬಂದರೆ…

Read More

ಹುಬ್ಬಳ್ಳಿಯಲ್ಲಿ ಮನಕಲುಕಿದ ಮಂಗಗಳ ಮಂಕಿ ಬಾತ್…

ಹುಬ್ಬಳ್ಳಿ: ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು,ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿಯನ್ನು ನೋಡಿದ್ದೇವೆ.ಆದರೇ ಈಗ ಮೂಕ ಪ್ರಾಣಿಗಳು ಕೂಡ ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಿವೆ. ಸದ್ಯ ತಾಯಿ ಮಂಗವೊAದು ತನ್ನ ಪುಟ್ಟ ಮರಿಗಾಗಿ ಆಹಾರ ಹುಡುಕಿಕೊಂಡು ಆಹಾರ ಅರಿಸುತ್ತ ಸಾಗಿದೆ. ಅಂದ ಹಾಗೇ ಇಂತಹದೊAದು ದೃಶ್ಯ ಗೋಚರಿಸಿದ್ದು,ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ.ಅರಣ್ಯ ಹಾಗೂ ಉದ್ಯಾನವನಗಳಲ್ಲಿ ಆಹಾರ ಪಡೆದುಕೊಂಡು ಜೀವನ ನಡೆಸುತ್ತಿದ್ದ ಮಂಗಗಳು ಈಗ ಎಲ್ಲಿಯೂ ಕೂಡ ಆಹಾರವಿಲ್ಲದೆ ಪರದಾಡುವಂತಾಗಿದೆ. ಲಾಕ್ ಡೌನ್ ಸಂಕಷ್ಟ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ತಟ್ಟಿದ್ದು,ಆಹಾರ ಅರಸಿಕೊಂಡು ಮಂಗಗಳು ನಗರದತ್ತ ಮುಖ ಮಾಡಿವೆ. ಕಾಲೋನಿಗಳಲ್ಲಿ ಜನರು ಹಾಕುತಿದ್ದ ಅಳಿದು ಉಳಿದ ಆಹಾರವನ್ನು ನೆಚ್ಚಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿರುವ ಮಂಗಗಳು ಈಗ ಆಹಾರವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿವೆ.ಜನರು ಆಹಾರವಿಲ್ಲದಿರುವ ಕಷ್ಟವನ್ನು ಹೇಳಿಕೊಂಡು ಆಹಾರ ಪಡೆಯುತ್ತಾರೆ. ಆದರೆ ಮೂಕ ಪ್ರಾಣಿಗಳ ರೋಧನ ಹೇಳ ತೀರದಾಗಿದೆ. ಮಂಗಗಳ ಮಂಕಿ ಬಾತ್ ನಿಜಕ್ಕೂ ಮನಕಲುಕುವಂತಿದೆ.ಆಹಾರವಿಲ್ಲದ…

Read More

ಶ್ರೀ ಶಿವಲಿಂಗೇಶ್ವರ ಮಹಾ ರಥೋತ್ಸವ ರದ್ದು..

ಆಳಂದ(ಕಲಬುರಗಿ):ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸುಕ್ಷೇತ್ರ ಮಾದನಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ಮಹಾ ರಥೋತ್ಸವವನ್ನು ರದ್ದು ಮಾಡಲಾಗಿದೆ. ಇದೆ ಮೇ.೭ರಂದು ಆಗಿ ಹುಣ್ಣಿಮೆ ಯಂದು ರಥೋತ್ಸವ ನಡೆಯಬೇಕಾಗಿತ್ತು.ಆದರೆ ಕೊರೊನಾದಿಂದ ಇಡಿ ದೇಶದ ಜನತೆ ಸಂಕಟ ಎದುರಿಸುತ್ತಿದ್ದಾರೆ.ಯಾವುದೇ ಜಾತ್ರೆ ರಥೋತ್ಸವಗಳನ್ನು ಮಾಡದಂತೆ ಸರಕಾರ ಸೂಚನೆ ನೀಡಿದೆ.ಹೀಗಾಗಿ ಸಾವಿರಾರು ಜನರು ಸೇರುವ ಈ ರಥೋತ್ಸವವನ್ನು ರದ್ದು ಮಾಡಲಾಗಿದೆ. ಇನ್ನು ಮಠದ ಒಡೆಯರಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿ ಸರಕಾರದ ಆದೇಶ ಪಾಲನೆ ಮಾಡಬೇಕೆಂದು ಜಾತ್ರೆ ರದ್ದು ಪಡಿಸಿರುದಾಗಿ ತಿಳಿಸಿದರು. ಅಲ್ಲದೆ, ಜಾತ್ರೆ ದಿನ ಯಾರು ಮನೆಯಿಂದ ಮಠದ ಕಡೆಗೆ ಬರದೆ ಮನೆಯಲ್ಲಿ ಜಾತ್ರೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ(ಕಲಬುರಗಿ)

Read More

ತುಮಕೂರಿನಲ್ಲಿ ಮತ್ತೀಬ್ಬರಿಗೆ ಕೊರೊನಾ, ಜನರಲ್ಲಿ ಆತಂಕ

ತುಮಕೂರು:ನಗರದ ಕೆಎಚ್‌ಬಿ ಕಾಲೋನಿಯ ನಿವಾಸಿ ೭೪ ವರ್ಷದ ವೃದ್ಧ ಪಿ-೫೩೫ಯಿಂದ ಕೊರೊನಾ ಸೊಂಕು ವ್ಯಾಪಿಸುತ್ತಲೇ ಇದೆ. ನಿನ್ನೆ ವೃದ್ಧನ ಸಂಪರ್ಕದಲ್ಲಿ ಇದ್ದ ಪಿ-೫೫೩ ಪತ್ನಿಗೆ ಸೊಂಕು ದೃಡಪಟ್ಟಿತ್ತು.ಇಂದು ಪಿ-೫೩೫ ಹಾಗೂ ಪಿ-೫೫೩ ಜೊತೆ ಸಂಪರ್ಕದಲ್ಲಿದ್ದ ಪಕ್ಕದ ಮನೆಯ ಇಬ್ಬರು ದಂಪತಿಗಳಿಗೆ ಸೊಂಕು ಧೃಡಪಟ್ಟಿದೆ. ಪತಿಗೆ ೪೦ ವರ್ಷ ಪಿ-೫೯೧,ಪತ್ನಿಗೆ ೨೯ ವರ್ಷ ಪಿ-೫೯೨ ಎಂದು ಗುರುತಿಸಲಾಗಿದೆ.ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೭ಕ್ಕೇರಿದೆ. ಇನ್ನೂ ವೃದ್ದ ಹಾಗೂ ಆತನ ಪತ್ನಿಯ ಜೊತೆ ಸಂಪರ್ಕದಲ್ಲಿದ್ದವರನ್ನ ಐಸೋಲೇಟ್ ಮಾಡಲಾಗಿದೆ. ಇದಲ್ಲದೆ,ವೃದ್ದನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದವರನ್ನ ಪತ್ತೆ ಹಚ್ಚಿ ಕ್ವಾರೈಂಟೈನ್‌ನಲ್ಲಿಟ್ಟಿದ್ದಾರೆ.ಮುAದಿನ ದಿನಗಳಲ್ಲಿ ಇನ್ನೆಷ್ಟು ಸೋಂಕು ವ್ಯಾಪಿಸುತ್ತದೆಯೋ ಎಂಬ ಅಂತಕ ನಾಗರಿಕರಲ್ಲಿ ಮನೆ ಮಾಡಿದೆ. ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Read More

ಕೂಲಿ ಕಾರ್ಮಿಕರಿಗೆ 50 ಟನ್ ತರಕಾರಿ ವಿತರಣೆ..

ಕೆಆರ್‌ಪುರ(ಬೆಂ.ನಗರ):ಲಾಕ್ ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ನೆರವಾಗುವಲ್ಲಿ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಕಾರ್ಯ ಶಾಘ್ಲನೀಯವೆಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದ್ದಾರೆ. ಕ್ಷೇತ್ರದ ದೇವಸಂದ್ರ ವಾರ್ಡನ ಬಿಜೆಪಿಯ ಯುವ ಮುಖಂಡ ಚನ್ನಕೇಶವ ಅವರು ಏರ್ಪಡಿಸಿದ್ದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತವಾಗಿ ೫೦ ಟನ್ ತರಕಾರಿ ವಿತರಿಸಿ ಮಾತನಾಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿರ್ಗತಿಕರಿಗೆ ಲಾಕ್‌ಡೌನ್ ಪ್ರಾರಂಭದಿAದಲೂ ದಿನಸಿ, ತರಕಾರಿ, ಆಹಾರ ಪ್ಯಾಕೆಟ್‌ಗಳ ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.ಕ್ಷೇತ್ರದ ಎಲ್ಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಡವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನ ತಲುಪಿಸಲು ನೇರವಾಗಿ ಕೋಲಾರ, ಚಿಕ್ಕಬಳ್ಳಾಪುರ, ಮಾಲೂರು ರೈತರಿಂದ ತರಕಾರಿ ಖರೀದಿಸಿ ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಾರ್ವಜನಿಕರು ಮನೆಯಿಂದ ಹೊರಬರದೇ ಮನೆಯಲ್ಲಿಯೆ ಇದ್ದು ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ,…

Read More

ಸಂಕಷ್ಟಕ್ಕೆ ಸಿಲುಕಿದ ಗೂಡ್ಸ್ ಆಟೋ ಚಾಲಕರು..

ತಿ.ನರಸೀಪುರ(ಮೈಸೂರು):ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗೂಡ್ಸ್ ಆಟೋ ಚಾಲಕರು ಇದೀಗ ಸರ್ಕಾರದ ಮೊರೆ ಹೋಗಿದ್ದಾರೆ. ಸದ್ಯ ಈ ಚಾಲಕರ ಪರ ತಾಲೂಕು ಪಂಚಾಯತ್ ಸದಸ್ಯ ರಮೇಶ್ ಧ್ವನಿ ಎತ್ತಿದ್ದು,ಆಟೋ ಚಾಲಕರ ಜೊತೆ ಶಿರಸ್ತೇದಾರ್ ಪ್ರಭುರಾಜ್ ಅವರಿಗೆ ಸಂಕಷ್ಟದ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಕಾರು ಚಾಲಕರ ಸಂಘದ ಅಧ್ಯಕ್ಷ ಮಣಿಕಂಠ ರಾಜ್ ಗೌಡ, ತಾಲ್ಲೂಕಿನಾದ್ಯಂತ ಸಾವಿರಕ್ಕೂ ಹೆಚ್ಚು ಚಾಲಕರು ಇದ್ದಾರೆ.ಹೀಗಾಗಿ ಅವರಿಗೆಲ್ಲಾ ನಮ್ಮ ಸಂಘದ ವತಿಯಿಂದ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಆದರೆ ಸರ್ಕಾರವು ಕೂಡ ಚಾಲಕರು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭ ಚಾಲಕರಾದ ಚಂದ್ರು,ಕಾರ್ ಮಲ್ಲಪ್ಪ,ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. ರೇವಣ್ಣ ಎಕ್ಸ್ ಪ್ರೆಸ್ ಟಿವಿ ತಿ.ನರಸೀಪುರ(ಮೈಸೂರು)

Read More

ಕೊರೊನಾಗಿಂತ ಮಳ್ಳವಳ್ಳಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆರ್ಭಟವೇ ಹೆಚ್ಚು..

ಮಳವಳ್ಳಿ(ಮಂಡ್ಯ):ಮಳವಳ್ಳಿ ಪಟ್ಟಣದ ಇನ್ಸ್ ಪೆಕ್ಟರ್ ಸಿ.ಎನ್.ರಮೇಶ್ ದೌರ್ಜನ್ಯ ಹಾಗೂ ದಬ್ಬಾಳಿಕೆ ಹೆಚ್ಚಾಗಿದ್ದು,ಕೂಡಲೇ ಅಮಾನತ್ತು ಮಾಡಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಗ್ದ ಜನರ ಮೇಲೆ ಬಹಳಷ್ಟು ದೌರ್ಜನ್ಯ ನಡೆಸಿದ್ದು,ಒಡೆಯುವುದು,ಎದುರಿಸುವುದು, ಕೇಸುಗಳನ್ನು ಹಾಕಿ ಇನ್ಸ್ ಪೆಕ್ಟರ್ ಸಿ.ಎನ್.ರಮೇಶ್ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಲಾಕ್‌ಡೌನ್ ಆದ ನಂತರ ಇವರ ಉದ್ಗಟತನ ಹೆಚ್ಚಾಗಿದೆ.ಬೆಳಿಗ್ಗೆ ೬ ಗಂಟೆಯಿAದ ಬೆಳಿಗ್ಗೆ ೭ ಗಂಟೆಯ ಸಮಯದಲ್ಲೂ ಅಗತ್ಯ ವಸ್ತು ಖರೀದಿಸಲು ರೈತರು,ಸಾರ್ವಜನಿಕರು, ವ್ಯಾಪಾರಸ್ಥ ಬಂದರೆ ಉದ್ದೇಶ ಪೂರ್ವಕ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನೂ ರಮೇಶರ ಮೇಲಿನ ಆರೋಪ ಪಟ್ಟಿಯ ಮನವಿ ಪತ್ರವನ್ನು ಡಿವೈಎಸ್‌ಪಿ ಪೃಥ್ವಿರಿಗೆ ನೀಡಿದ್ದೇವೆ.ಸೋಮವಾರದೊಳಗೆ ಇನ್ಸ್ ಪೆಕ್ಟರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸೋಮವಾರ ನಂತರ ಮುಖಂಡರ ಸಭೆ ಕರೆದು…

Read More

ಊರಿಗೆ ತೆರಳಲು ಕಾತರ, ಕಾಲ್ನಡಿಗೆಯಲ್ಲಿ ಮೆಜಿಸ್ಟಿಕ್‌ವರೆಗೂ ಕಾರ್ಮಿಕರ ಪ್ರಯಾಣ

ಬೆಂಗಳೂರು:ಲಾಕ್‌ಡೌನ್ ಕಾರಣದಿಂದ ಕಳೆದ ಒಂದೂವರೆ ತಿಂಗಳಿನಿAದ ಬೆಂಗಳೂರು ನಗರದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರಿಗೆ ಇಂದು ಊರಿಗೆ ಹೋಗಲು ಒಂದು ಬಾರಿ ಸರ್ಕಾರ ಅವಕಾಶ ನೀಡಿರುವುದು ಇದೀಗ ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆಯಿಂದಲೇ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾವಿರಾರು ಕಾರ್ಮಿಕರು ತಮ್ಮೂರಿಗೆ ತೆರಳಲು ಆಗಮಿಸಿದ್ದರು. ಮೆಜೆಸ್ಟಿಕ್‌ನಲ್ಲಿ ನೂಕುನುಗ್ಗಲು ಉಂಟಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಇಲ್ಲಿಗೆ ಗಾಳಿಗೆ ತೂರಿಹೋಗುತ್ತಿರುವುದು ಕಂಡುಬರುತ್ತಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡನಾಗಮಂಗಲದ ಕಾರ್ಮಿಕರು ತಮ್ಮ ಸ್ವಂತ ಊರಾದ ಯಾದಗಿರಿಗೆ ತೆರಳಲು ಎಲೆಕ್ಟ್ರಾನಿಕ್ ಸಿಟಿಯಿಂದ ಮೆಜೆಸ್ಟಿಕ್‌ವರೆಗೂ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಇದೇ ವೇಳೆ ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಿತಿಯ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ದೂರದೂರುಗಳಿಗೆ ಕರೆದುಕೊಂಡು ಹೋಗಬೇಕಾಗಿರುವುದರಿಂದ ಕೆಎಸ್‌ಆರ್‌ಟಿಸಿ ಎರಡು,ಮೂರು ಪಟ್ಟು ಹೆಚ್ಚು ದರ ಕೇಳಿತ್ತು.ಅಲ್ಲದೆ, ವಲಸೆ ಕೂಲಿ ಕಾರ್ಮಿಕರು ಸಾವಿರಾರು ರೂಪಾಯಿಗಳನ್ನು ಎಲ್ಲಿಂದ…

Read More

ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ

ಸಿರಿವಾರ(ರಾಯಚೂರು): ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕಿನಲ್ಲಿ ನಡೆದಿದೆ. ಸಿರಿವಾರಪಟ್ಟಣದ ವೀರಮದಕರಿ ಕಾಲೂನಿಯಲ್ಲಿ ಇಂದುಸAಜೆ ಸಿಡಿಲು ಬಡೆದು ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿದೆ.ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹರಾಕೇರಿಯ ಅಗ್ನಿಶಾಮಕ ವಾಹನ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲ ಕಾಲ ಜನರಲ್ಲಿ ಆತಂಕ ವಾತವರಣ ನಿರ್ಮಾಣವಾಗಿತ್ತು.ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರಿವಾರ(ರಾಯಚೂರು)

Read More

ಕಾಂಗ್ರೆಸ್ ಮುಖಂಡನಿಗೆ ಸೇರಿದ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ರಮ ಪಡಿತರ ದಾಸ್ತಾನು..

ದೇವದುರ್ಗ(ರಾಯಚೂರು):ತಾಲೂಕಿನ ನಾಗಡದಿನ್ನಿ ಗ್ರಾಮದಲ್ಲಿರುವ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮನ ಗೌಡ ನಾಗಡದಿನ್ನಿಗೆ ಸೇರಿದ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು ವರ್ಷದಿಂದ ಕಟ್ಟಡ ತಕರಾರು ಇರುವ ಹಿನ್ನೆಲೆಯಲ್ಲಿ ಭೀಮನ ಗೌಡ ನಾಗಡದಿನ್ನಿ ತಮ್ಮ ನ್ಯಾಯಬೆಲೆ ಅಂಗಡಿಯನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿದ್ದಾರೆ.ಕಳೆದ ೨ ವರ್ಷದಿಂದ ಕಟ್ಟಡ ಮಾಲಿಕರು ಮತ್ತು ನ್ಯಾಯ ಬೆಲೆ ಅಂಗಡಿಯ ಮಾಲೀಕರು ವಾಜ್ಯ ಇರುವ ಹಿನ್ನಲೆಯಲ್ಲಿ ಇಬ್ಬರು ಅಂಗಡಿಗೆ ಕೀಲಿ ಹಾಕಿದ್ದಾರೆ, ಹೀಗಾಗಿ ದಾಸ್ತಾನು ೧೪೦ ಪಡಿತರ ಚೀಟಿದಾರರಿಗೆ ಸಂಬAಧಿಸಿದ್ದು ಎಂದು ತನಿಖೆ ವೇಳೆ ತಿಳಿದು ಬಂದಿದೆ.ಜೊತೆಗೆ ಇಲಾಖೆ ಗಮನಕ್ಕೆ ತರದೇ ಪಡಿತರ ಚೀಟಿದಾರರನ್ನು ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ತಹಶೀಲ್ದಾರ್ ಮಧುರಾಜ್ ಯಾಳಗಿ ನೇತೃತ್ವದ ಅಧಿಕಾರಿಗಳ ತಂಡ ತನಿಖೆ ಕೈಗೊಂಡು ೨೦ ಕ್ವಿಂಟಲ್ ಅಕ್ಕಿ, ೧೪೦ ಲೀಟರ್ ಒಳ್ಳೆಣ್ಣೆ,…

Read More