ಹೊಸ ವರ್ಷಾಚರಣೆ ಗೆ ಅನುಮತಿ ನೀಡಬಾರದೆಂದು ಪೋಲೀಸ್ ಆಯುಕ್ತರಿಗೆ ಮನವಿ

ಬೆಂಗಳೂರು ನಲ್ಲಿ ಹೊಸ ವರ್ಷಾಚರಣೆ ಗೆ ಅನುಮತಿನೀಡಬಾರದೆಂದು  ಹಿಂದೂ ಸಂಘಟನೆ ಯೊಂದು ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆಂದು ಸಮಾಚಾರವಿದೆ….ಹೊಸ ವರ್ಷದ ಆರಂಭದಲ್ಲಿ ಅಹಿತರ ಘಟನೆಗಳು ನಡೆಯಬಾರದು ಎನ್ನುವ ಹಿತದ್ರೃಷ್ಟಿ ಯಿಂದ ಮತ್ತು ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಓಡಾಡುವ ಪ್ರದೇಶಗಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಬಾರದೆಂದು ಪೋಲೀಸ್ ಆಯುಕ್ರರು ಪಿ.ಸುನಿಲ್ ಕುಮಾರ್ ರವರಿಗೆ ಹಿಂದು ಜನ ಜಾಗ್ರೃತಿ ಸಮಿತಿ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ….ಪಾಶ್ಚಾತ್ಯ ಸಂಸ್ಕೃತಿಗಳ ಅಡಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡುವ ಹೊಸ ವರ್ಷಾಚರಣೆ ನೆಪದಲ್ಲಿ ಕೆಲ ಪುರುಷರು ಮತ್ತು ಕೆಲ ಮಹಿಳೆಯರು ಒಟ್ಟಾಗಿ ಮದ್ಯಪಾನ ಹಾಗು ಧೂಮಪಾನ ಮಾಡಿ ಕುಣಿದು ಕುಪ್ಪಳಿಸುವುದು ನಡೆಯುತ್ತೆದೆ ಎಂದು ಎರಡು ಪುಟಗಳ ಪತ್ರ ಬರೆದಿದ್ದಾರೆ….ಕಳೆದ ಎರಡು ವರ್ಷಗಳ ಹಿಂದೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಗಳನ್ನು ನೆನಪು ಮಾಡಿದ ಹಿಂದು ಜನ ಜಾಗ್ರೃತಿ ಸಮಿತಿ ಇದಕ್ಕೆ ಅವಕಾಶ ಕೊಡಬಾರದೆಂದು ಮನವಿ ಮಾಡಿದೆ…..

ReplyForward

Please follow and like us:

Related posts

Leave a Comment