ಪಿಂಚಣಿ ನೀಡುವಲ್ಲಿ ಅಧಿಕಾರಿಗಳ ವಿಳಂಬದಿಂದ ಬೆಸತ್ತು ವೃದ್ದರು ಅಂಚೆ ಕಛೇರಿಯ ಮುಂದೆ ಪ್ರತಿಭಟನೆ,

ಗುಡಿಬಂಡೆ : ತಾಲ್ಲೂಕಿನಲ್ಲಿ ಸಂಧ್ಯಾ ಸುರಕ್ಷಾ, ಅಂಗವೀಕಲ, ವಿಧವಾ, ವೃದ್ಯಾಪ್ಯವೇತನ ನೀಡುವಲ್ಲಿ ಅಂಚೆ ಕಛೇರಿಯ ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗುಡಿಬಂಡೆ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ವೃದ್ದರು, ಅಂಗವಿಕಲರು ಪ್ರತಿಭಟಿಸಿದರು.
ತಾಲ್ಲೂಕಿನಲ್ಲಿ ಒಟ್ಟು ೫೦೦೦ ಜನ ಸಂಧ್ಯಾ ಸುರಕ್ಷಾ, ಅಂಗವೀಕಲ, ವಿಧವಾ ವೇತನ, ವೃದ್ಯಾಪ್ಯ ವೇತನ ಫಲಾನುಭವಿಗಳು ಇದಾರೆ ಆದರೆ ಹಂಚಿಕೆದಾರರು ಹಾಗೂ ಅಂಚೆ ಅಧಿಕಾರಿಗಳ ಬೇಜವ್ದಾರಿಯಿಂದ ೩ ತಿಂಗಳಾದರು ವೇತನವಿಲ್ಲದೆ ಪರದಾಡುತ್ತಿದ್ದಾರೆ ಎಂದು ಅವರು ದೂರಿದರು… ಕೆಲ ಅಂಗವಿಕಲರು ಅಂಚೆ ಕಛೇರಿಯ ಬಳಿ ಬಂದು ಪೋಸ್ಟ್ ಮ್ಯಾನ್ ಕೇಳಿದರೆ ನಿಮ್ಮ ಫಾರಂ ಇನ್ನು ಆಗಿಲ್ಲಾ ನಾಳೆ ಬನ್ನಿ ಎಂದು ಹೇಳುತ್ತಾರೆ ಆದರೆ ಅಂಗವಿಕಲರು ಒಂದುವಾರ ತಿರುಗಾಡಿದರು ಪಿಂಚಣಿ ನೀಡುತ್ತಿಲ್ಲ ಜೊತೆಗೆ ಒಂದು ತಿಂಗಳು ಪಿಂಚಣಿ ನೀಡಿದರೇ ೫೦ ರೂಪಾಯಿ ಅವರಿಗೆ ಲಂಚ ಕೋಡಬೇಕು ಅವರು ಹೇಳಿದ ಕಡೆಗೆ ಹೋಗಬೇಕು ಇಲ್ಲವಾದಲ್ಲಿ ಪಿಂಚಣಿ ಕೂಡ ಸರಿಯಾಗಿ ಸಿಗುವುದಿಲ್ಲವೆಂದು ಅಂಗವಿಕಲರು ತಮ್ಮ ಅಳಲನ್ನು ತೊಡಿಕೊಂಡರು.
ಅಧಿಕಾರಿಗಳ ಬೇಜವ್ದಾರಿ—— ಅಧಿಕಾರಿಗಳು ಕಂಪ್ಯೂಟರ್ ಕೆಟ್ಟೊಗಿದೆ. ಸರ್ವರ್ ಪ್ರಾಬ್ಲಮ್, ಕೆ೨ನಲ್ಲಿ ಸಮಸ್ಯೆಯಾಗಿದೆ ಎಂದು ಸುಳ್ಳು ನೆಪವನ್ನು ಹೇಳಿ ಪಿಂಚಣಿ ಪಡೆಯಲು ಬಂದವರನ್ನು ವಾಪಸ್ಸು ಕಳಿಸುತ್ತಾರೆ. ಸ್ಥಳ ಜನಪ್ರತಿನಿದಿಗಳು ಬಂದು ಅವರಿಗೆ ಮೌಖಿಕವಾಗಿ ತಿಳಿಸಿ ಪಿಂಚಣಿದಾರರು ಸರ್ಕಾರ ನೀಡುವ ಹಣದಿಂದ ಜೀವನ ಮಾಡುತ್ತಿದ್ದಾರೆ ಆದ್ದರಿಂದ ತಾವು ಮಾಡುತ್ತಿರುವ ಕೆಲಸ ಸೇವೆಯೆಂದು ಭಾವಿಸಿ ವಯೋ ವೃದ್ದರು ಮತ್ತು ಅಂಗವಿಲರಿಗೆ ಸಹಕರಿಸಲು ಸೂಚನೆ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲಾದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು….
ಪ್ರತಿಭಟನಾ ಸ್ಥಳಕ್ಕೆ ಗ್ರೇಡ್೨ ತಹಶೀಲ್ದಾರ್ ಸಿಬ್ಗತುಲ್ಲಾ ಆಗಮಿಸಿ ನಂತರ ಅಂಚೆ ಕಛೇರಿಗೆ ಬೇಟಿ ನೀಡಿ ಅಂಚೆ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದಾಗಿ ಪ್ರತಿಭಟನಾಕಾರರ ಮನವೊಳಿಸಿದರು.
ಅಂಚೆ ಕಛೇರಿಯ ಅಧಿಕಾರಿ: ನಮ್ಮ ಕಛೇರಿಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಆದ್ದರಿಂದ ಸಾರ್ವಜನಿಕರು ಸ್ವಲ್ಪ ಸಹಕರಿಸಬೇಕು. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲಾಗುವುದು ಎಂದು ಹೇಳಿದರು..
ಪಟ್ಟಣ ಪಂಚಾಯಿತಿ ಸದಸ್ಯೆ *ಲಕ್ಷ್ಮೀಕಾಂತಮ್ಮ ಮಾತನಾಡಿ ಪಿಂಚಣಿ ಪಡೆಯುವ ಹಲವಾರು ಜನ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದರು. ಆಗ ಅಂಚೆ ಕಛೇರಿಯ ಸಿಬ್ಬಂದಿಗೆ ಮೊದಲೆ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದೆ ಆದರೆ ಇಂದಿಗೂ ಕೂಡ ಬಗೆ ಹರಿದಿಲ್ಲ ಈ ಸಮಸ್ಯೆ ಮುಂದುವರೆದರೆ ಕಛೇರಿಗೆ ಮುತ್ತಿಗೆ ಹಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೆಚ್ಚರಿಸಿದರು. ಅಂಚೆ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದರು…

Please follow and like us:

Related posts

Leave a Comment