ಗದಗ ಬ್ರೇಕಿಂಗ್ BIG IMPACT…… ವೃದ್ಧೆಯ ಕತ್ತಲ ಬದುಕಿಗೆ ಬೆಳಕಾದ ಎಕ್ಸ್ ಪ್ರೆಸ್ ಟಿವಿ

ಗದಗ: ಗದಗ ತಾಲೂಕಿನ ಕಲ್ಲೂರು ಗ್ರಾಮದ ವೃದ್ಧೆ ಯಲ್ಲಮ್ಮ ಪಾಟೀಲ್ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಎಕ್ಸ್ ಪ್ರೆಸ್ ಟಿವಿ ಪ್ರಸಾರ ಮಾಡಿದ್ದ ವರದಿ ಫಲಶೃತಿಗೊಂಡಿದೆ. ಸದ್ಯ ಕಳೆದ ೨೦ ವರ್ಷಗಳಿಂದ ಸೂರು ಇಲ್ಲದೆ ವೃದ್ಧೆ ಯಲ್ಲಮ್ಮ ಪಾಟೀಲ್ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು, ಇದರ ಹಿನ್ನೆಲೆಯಲ್ಲಿ ಇದರ ಬಗ್ಗೆ ಎಕ್ಸ್ ಪ್ರೆಸ್ ಟಿವಿ ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು. ಹೀಗಾಗಿ ಈ ವರದಿಯಿಂದ ತಕ್ಷಣ ಎಚ್ಚೆತ್ತುಕೊಂಡ ಗದಗದ ಏಕಲವ್ಯ ಟ್ರಸ್ಟ್ , ಜಿಲ್ಲಾ ಪಂಚಾಯತ್ ಅಧಿಕಾರಗಳು ಹಾಗೂ ಧರ್ಮಸ್ಥಳ ಸಂಘ ಮತ್ತು ಇದೇ ಗ್ರಾಮದ ಚಂದ್ರಶೇಖರ ಹರಿಜನ ಹಾಗೂ ಸ್ನೇಹಿತರು ವೃದ್ಧೆ ಯಲ್ಲಮ್ಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅAದ ಹಾಗೇ ಅಜ್ಜಿಗೆ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಮನೆ ನಿರ್ಮಾಣ ಮಾಡಲು ಚಂದ್ರಶೇಖರ ಹರಿಜನ ಮತ್ತವರ ಯುವ ಪಡೆ ಪಣ ತೊಟ್ಟರೇ, ಜಿಲ್ಲಾ ಪಂಚಾಯತ್ ಅಧಿಕಾರಿಗಳೂ ಪ್ರಧಾನ ಮಂತ್ರಿ ಗ್ರಾಮೀಣ…

Read More

ರೈಲ್ವೇ ಜಂಕ್ಷನ್ ತಪಾಸಣೆ- ಜನರಲ್ ಮ್ಯಾನೇಜರ್ ಅಜಯ್ ಕುಮಾರ್…!

ಬಂಗಾರಪೇಟೆ: ಬಂಗಾರಪೇಟೆಯ ರೈಲ್ವೇ ಜಂಕ್ಷನ್ ತಪಾಸಣೆ ಹಾಗೂ ಮಕ್ಕಳ ಉದ್ಯಾನವನ ಉದ್ಘಾಟನೆಗೆ ರೈಲ್ವೇ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಬಂಗಾರಪೇಟೆ ರೈಲ್ವೇ ಜಕ್ಷಂನ್ ಗೆ ಭೇಟಿ ನೀಡಿದರು. ಅಜಯ್ ಕುಮಾರ್ ಸಿಂಗ್ ಭೇಟಿ ನೀಡುವ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಅವರನ್ನು ಭೇಟಿ ಮಾಡಿದರು. ಜಿಜೆಪಿಯ ಮುಖಂಡರು ಜಿ.ಪಂ.ಸದಸ್ಯ ಮಹೇಶ್ ನೇತ್ರತ್ವದಲ್ಲಿ ಹುಣಸನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಹೆ.ಚ್.ಆರ್.ಶ್ರೀನಿವಾಸ್ ಮತ್ತು ಗ್ರಾಮಸ್ಥರು, ಹಾಗೂ ರೈತ ಸಂಘದ ಮುಖಂಡ ರಾಮೇಗೌಡ ಬಂಗಾರಪೇಟೆ ಮತ್ತು ಬೂದಿಕೊಟೆ ರಸ್ತೆ ಮಾರ್ಗದಲ್ಲಿ ಇರುವ ರೈಲ್ವೇ ಗೇಟ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನವು ಮಾಡಿ ಕೊಡಬೇಕೆಂದು ಅಜಯ್ ಕುಮಾರ್ ಸಿಂಗ್ ಮತ್ತು ಸಂಸದ ಮುನಿಸ್ವಾಮಿ ಅವರೊಡನೆ ತೆರಳಿ ಸ್ಥಳ ಪರಶೀಲನೆ ನಡೆಸುವಂತೆ ಒತ್ತಾಯ ಮಾಡುವ ಮೂಲಕ ಸ್ಥಳ ಪರಿಶೀಲನೆ ಮಾಡಿದರು. ಸಂಸದ ಮುನಿಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ಬಂಗಾರಪೇಟೆ ಬೂದಿಕೋಟೆ ರಸ್ತೆಯಲ್ಲಿರುವ ಗೇಟ್ ಅನ್ನು ತೆರವುಗೊಳಿಸಲು…

Read More

ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್ ಕಮಿಟಿಗಾಗಿ ಚುನಾವಣೆ..!

ಸಿರಗುಪ್ಪ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್ ಗಳಿಗೆ ನೂತನ ಕಮಿಟಿ ರಚಿಸಲು ಪಾರದರ್ಶಕತೆಗಾಗಿ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ಚುನಾವಣಾ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಕಮಿಟಿಯಲ್ಲಿ ಒಟ್ಟು 611 ಮತದಾರಿದ್ದು,ಈ ಪೈಕಿ 44 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. 586 ಜನ ತಮ್ಮ ಹಕ್ಕಿನ ಮತ ಮತ ಚಲಾಯಿಸಿದ್ದಾರೆ. ನಗರದ ತಾಲ್ಲೂಕು ಕ್ರೀಡಾಂಗಣದ ಬಳಿ ಇರುವ ಉರ್ದು ಪ್ರೌಢ ಶಾಲೆಯಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆ ನಡೆಸಲಾಯಿತು. ಕೊರೋನಾ ಹಿನ್ನಲೆಯಲ್ಲಿ ಮತದಾರರು ಮಾಸ್ಕ್ ,ಸಾಮಾಜಿಕ ಅಂತರ, ಸಾನಿಟೈಸರ್ ಉಪಯೋಗಿಸಿಕೊಂಡು ಮತ ಚಲಾಯಿಸಿದ್ದಾರೆ.ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದ್ದು, ಮತದಾರರು ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದಾರೆ. ಕಮಿಟಿಯ ಅಡಳಿತಾಧಿಕಾರಿಯಾದ ಮಹಮದ್ ಸಾಧಿಕ್ ಬಾಷಾ ಇವರು ಚುನಾವಣಾ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನು ಮತಗಟ್ಟೆಗೆ ಸಿರುಗುಪ್ಪ ಪೊಲೀಸ್ ಠಾಣಾ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದು, ಶಾಂತಹಿಯುತವಾಗಿ ಮತದಾನ ಪ್ರಕ್ರಿಯೆಯನ್ನು ನೇರೆವೆರಿಸಲಾಯಿತು. ವರದಿ- ಡಿ.…

Read More

ನಿರಾಶ್ರಿತ ವೃದ್ದರಿಗೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ರಗ್ಗು ವಿತರಣೆ..!

ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಸೋಂಪುರ ಗ್ರಾಮದಲ್ಲಿನ 25 ನಿರಾಶ್ರಿತ ವೃದ್ದರಿಗೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರತ್ನ ನಟರಾಜು ರಗ್ಗು ವಿತರಣೆಯನ್ನು ಮಾಡಿದರು. ನಂತರ ಮಾತನಾಡಿ ಇಂದು ನಮ್ಮ ನಾಡಿನಲ್ಲಿ ಏನೇಲ್ಲಾ ಸಿರಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ತಂದೆ ತಾಯಿಗಳು ಮಕ್ಕಳನ್ನು ಸಾಕಿ ಸಲಹುತ್ತಾರೆ, ಆದರೆ ಅದೇ ಮಕ್ಕಳು ತಮ್ಮ ತಂದೆ ತಾಯಿಗಳನ್ನು ಬೀದಿಗೆ ಬಿಡುತ್ತಾರೆ. ತನ್ನ ಹೊಟ್ಟೆಯಲ್ಲಿರುವಾಗಲೇ ತಾಯಿ ಮಕ್ಕಳಿಗೋಸ್ಕರ ಕನಸಿನಲ್ಲಿ ಗಾಜಿನ ಅರಮನೆಯನ್ನೇ ಕಟ್ಟಿರುತ್ತಾರೆ. ಮಕ್ಕಳು ಮಾತ್ರ ತಮ್ಮನ್ನ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳುವುದಿಲ್ಲ.ಅಂತಹವರಿಗೆ ನಮ್ಮ ಟ್ರಸ್ಟ್ ನ ವತಿಯಿಂದ ನಮ್ಮ ಕೈಲಾದ ಸೇವೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ನಂತರ ಈ ಸಂದರ್ಭದಲ್ಲಿ ಸೋಂಪುರ ಗ್ರಾಮ ಪಂಚಾಯತಿಯ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ಸಂಕಲ್ಪ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಸೌಮ್ಯ ಮಂಜುನಾಥ್,…

Read More

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061ನೇ ಜಯಂತಿ..!

ನಂಜನಗೂಡು: ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061ನೇ ಜಯಂತಿ ಮಹೋತ್ಸವವನ್ನು ಸಿಎಂ ಯಡಿಯೂರಪ್ಪನವರು ಉದ್ಘಾಟಿಸಿದರು. ಇದೇ ಸಂದರ್ಭ ಸುತ್ತೂರು ಶ್ರೀ ಮಠದ ಪಂಚಾಂಗ ಹಾಗೂ ಕೃತಿ ಲೋಕಾರ್ಪಣೆ ಮಾಡಿದರು. ಬಳಿಕ ಸಿಎಂ ಮಾತನಾಡಿ ಹತ್ತು ಶತಮಾನಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಕಪಿಲಾ ನದಿ ದಡದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಹಾ ಸಂಸ್ಥಾನವನ್ನು ಸ್ಥಾಪಿಸಿದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ವರು ಶ್ರೇಷ್ಠ ಸಂತರಾಗಿದ್ದರು. ಅಂದು ಇವರ ದೂರದೃಷ್ಟಿಯಿಂದ ಸಾಮ್ರಾಜ್ಯ ವಿಸ್ತರಣೆಗಾಗಿ ಗಂಗ ಮತ್ತು ಚೋಳರ ನಡುವೆ ನಡೆಯಬೇಕಿದ್ದ ಘನಘೋರ ಯುದ್ಧವನ್ನು ತಡೆದು ಘೋರ ದುರಂತ ಒಂದನ್ನು ತಪ್ಪಿಸಿದ ಮಹಾನ್ ತಪಸ್ವಿ ಎಂದು ಆದಿ ಜಗದ್ಗುರುಗಳ ಮತ್ತು ಸುತ್ತೂರು ಶ್ರೀ ಕ್ಷೇತ್ರ ದಲ್ಲಿ ನಡೆಯುವ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ…

Read More

ಹಗಲಿನಲ್ಲಿ ಇಸ್ಪೀಟ್ ಆಟ.. ಸಂಜೆಯಾದರೇ ಕುಡುಕರ ಅಡ್ಡೆಯಾದ ಸರ್ಕಾರ ಶಾಲೆ..!

ಕೊರಟಗೆರೆ: ಹಗಲಿನಲ್ಲಿ ಇಸ್ಪೀಟ್ ಆಟ.. ಸಂಜೆಯಾದರೇ ಕುಡುಕರ ಅಡ್ಡೆ.. ರಾತ್ರಿಯಿಡಿ ಕುರಿಮೇಕೆಯ ದೊಡ್ಡಿಯ ಜೊತೆ ಅನೈತಿಕ ಚಟುವಟಿಕೆಯ ತಾಣ ಆಗಿರುವ ಸರಕಾರಿ ಪ್ರಾಥಮಿಕ ಶಾಲೆಯ ಕಿಟಕಿ ಬಾಗಿಲುಗಳೇ ಮಾಯವಾಗಿವೆ. ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡ, ಅಡುಗೆ ಕೊಠಡಿಗಳ ಮಾಹಿತಿಯೇ ಶಿಕ್ಷಕರಿಗೆ ಇಲ್ವಂತೆ, ಇದು ನಮ್ಮ ಕೊರಟಗೆರೆ ಶಿಕ್ಷಣ ಇಲಾಖೆಯ ಕತೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಕುರುಡುಗಾನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಭದ್ರತೆಯ ಜೊತೆ ಶಿಕ್ಷಣವು ಮರೀಚಿಕೆ ಆಗಿದೆ. ಸ್ಥಳೀಯ ಶಿಕ್ಷಕರ ದಿವ್ಯ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡ, ಅಡುಗೆ ಕೊಠಡಿ, ನೀರಿನ ತೊಟ್ಟಿ, ಓವರ್ಹೆಡ್ ಟ್ಯಾಂಕ್, ನೀರಿನ ಟ್ಯಾಂಕು, ಕೊಳವೆಬಾವಿ, ಶೌಚಾಲಯವು ಸಂಪೂರ್ಣ ನಾಶವಾಗಿವೆ. ಇನ್ನೂ ಕುರುಡುಗಾನಹಳ್ಳಿ ಗ್ರಾಮದ 130 ಮನೆಗಳಲ್ಲಿ 617 ಮತದಾರರು ಇದ್ದಾರೆ. ಇದೇ…

Read More

ಅಕ್ರಮ ಗಣಿಗಾರಿಕೆಗೆ ನಿರ್ಬಂಧ-ಎಕ್ಸ್ ಪ್ರೆಸ್ ಟಿವಿ ವರದಿಗೆ ಎಚ್ಚೇತ್ತ ಅಧಿಕಾರಿಗಳು..!

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕೂಗಳತೆಯ ದೂರದ ತಿರುಮಲಪುರ ಕಾಲೋನಿ-ಭೀಚನಹಳ್ಳಿ ಸಮೀಪ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ತಹಸೀಲ್ದಾರ್ ಕುಂಞ ಅಹಮ್ಮದ್ 145 ಸೆಕ್ಷನ್ ಜಾರಿ ಮಾಡುವ ಮೂಲಕ ಗಣಿಗಾರಿಕೆ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಏರಿದ್ದಾರೆ. ಇಲ್ಲಿನ ಅಕ್ರಮ ಗಣಿಗಾರಿಕೆಯ ವಿರುದ್ದ ಎಕ್ಸ್ಪ್ರೆಸ್ ಟಿವಿ ಬೀದಿಗೆ ಬಿದ್ದ ರೈತರ ಬದುಕು ಎಂಬ ಶೀರ್ಷಿಕೆಯಡಿ ಪ್ರಸಾರ ಮಾಡಲಾಗಿದ್ದ ವರದಿಗೆ ಎಚ್ಚೇತ್ತ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಬೆಳ್ಳೂರು ಹೋಬಳಿ ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ತಂಡ ನೀಡಿದ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ತಹಸೀಲ್ದಾರ್ ಕುಂಞ ಅಹಮ್ಮದ್ ಭೇಟಿ ನೀಡಿ, ಗಣಿಗಾರಿಕೆ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ 145 ಸೆಕ್ಷನ್ ಜಾರಿಗೊಳಿಸಿದ್ದಲ್ಲದೆ, ಸ್ಥಳೀಯ ರೈತಾಪಿ ವರ್ಗ ಯಾವುದೇ ಅತಂಕಕ್ಕೊಳಗಾಗದಂತೆ ಆತ್ಮಸ್ಥೈರ್ಯ ತುಂಬಿದರು.ಒಟ್ಟಾರೆ ತಾಲ್ಲೂಕಿನಾಧ್ಯಂತ…

Read More

ತೋಟಗಾರಿಕೆ ಇಲಾಖೆಯಿಂದ ತರಭೇತಿ-ರೈತರೆಲ್ಲರೂ ಸರ್ಕಾರದಿಂದ ಸಿಗುವ ಸವಲತ್ತು ಪಡೆಯಬೇಕು- ಸಹಾಯಕ ನಿರ್ದೇಶಕಿ ಭಾರತಿ…!

ಪಿರಿಯಾಪಟ್ಟಣ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಪಿರಿಯಾಪಟ್ಟಣದ ತೋಟಗಾರಿಕೆ ಇಲಾಖೆಯ ವತಿಯಿಂದ ಕಚೇರಿ ಆವರಣದಲ್ಲಿ ದಿನಾಂಕ 11-01-21 ರಂದು ಸೋಮವಾರ ತರಬೇತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕಾಭಿವದ್ಧಿ ಹೊಂದುವಂತೆ ಪಿರಿಯಾಪಟ್ಟಣ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿರವರು ಮಾಧ್ಯಮದೊಂದಿಗೆ ತಿಳಿಸಿದರು. ಕೋವಿಡ್ – 19 ಸಮಸ್ಯೆಯಿಂದಾಗಿ 2020 – 21ನೇ ಸಾಲಿನಲ್ಲಿ ಇಲಾಖೆಯ ಅನೇಕ ಯೋಜನೆಗಳಿಗೆ ಸರ್ಕಾರದಿಂದ ಬಜೆಟ್ ತುಂಬಾ ಕಡಿಮೆ ಇರುವುದರಿಂದ ಈ ವರ್ಷ ಪ್ರಮುಖವಾಗಿ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾ ಯೋಜನೆ ಅಂದರೆ ಹನಿ ನೀರಾವರಿ ಯೋಜನೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಕೃಷಿಗೆ ಮಿತವಾಗಿ ನೀರನ್ನು ಬಳಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಸುವುದು. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು…

Read More

ಸಿ ಆರ್ ಎಸ್ ಸೋಲಿನ ಅನುಭವವನ್ನು ನೆನಪಿಸಿಕೊಳ್ಳಲಿ-ಮಾಜಿ ಸಂಸದ ಶಿವರಾಮೇಗೌಡ..!

ನಾಗಮಂಗಲ: ಚಿಕ್ಕಬಳ್ಳಾಪುರ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶದ ಲೆಕ್ಕಚಾರ ಸಮರ್ಥಿಸಿಕೊಳ್ಳುವಾಗ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಅವರ ಸೋಲಿನ ನಂತರ ಅವರು ಹೇಗೆಲ್ಲಾ ನಡೆದುಕೊಂಡಿದ್ದರು ಎಂಬ ಬಗ್ಗೆ ಅವಲೋಕಿಸಿಕೊಳ್ಳಲಿ ಎಂದು ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ವಿರುದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಪಟ್ಡಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಗಮಂಗಲ ವಿಧಾನಸಭಾ ಕ್ಷೇತ್ರದ 35 ಗ್ರಾ.ಪಂ.ಗಳ ಪೈಕಿ ಅತಿ ಹೆಚ್ಚು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿರುವುದು ಸತ್ಯ. ಆದರೆ ಕಾಂಗ್ರೆಸ್ ಬೆಂಬಲಿತರೇ ಅತಿ ಹೆಚ್ಚು ಜಯಗಳಿಸಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ಪಕ್ಷವನ್ನು ಅಣಕಿಸುವ ವಿರೋಧಿ, ತಾವು ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಹೇಗೆಲ್ಲಾ ನಡೆದುಕೊಂಡರು, ಎಷ್ಟೆಲ್ಲಾ ದಿನಗಳ ಕಾಲ ಕ್ಷೇತ್ರದ ಕಡೆ ತಲೆಹಾಕಲಿಲ್ಲ ಎಂಬುದನ್ನ ಅವಲೋಕಿಸಿಕೊಂಡು ನಂತರ ನಮ್ಮ…

Read More

ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ನಿಂತ ಅಪ್ರಾಪ್ತರ ವಿವಾಹ..!

ಬಾಗೇಪಲ್ಲಿ: ಸರ್ಕಾರ ಬಾಲ್ಯ ವಿವಾಹ ನಿಯಂತ್ರಣ ಮಾಡಲು ಏನೇ ಹರಸಾಹಸ ಪಟ್ಟರೂ ಇದು ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಜನರು ವರ್ತಿಸುತ್ತಾರೆ ಎನ್ನುವುದಕ್ಕೆ ಇಲ್ಲಿ ನಿಂತ ಬಾಲ್ಯ ವಿವಾಹದ ಪ್ರಸಂಗವೇ ಸಾಕ್ಷಿಯಾಗಿದೆ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗುವ್ವಲವಾರಪಲ್ಲಿಯಲ್ಲಿ . ಇಲ್ಲೊಂದು ಜೋಡಿ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದರು. ಎಲ್ಲಾ ಅಂದುಕೊಂಡ ಹಾಗೆ ಹಾಗಿದ್ದರೆ ಇಷ್ಟೋತ್ತಿಗೆ ಆ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿಡಬೇಕಾಗಿತ್ತು, ಅಧಿಕಾರಿಗಳ ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ನಡೆಯ ಬೇಕಿದ್ದ ಬಾಲ್ಯವಿವಾಹ ನಿಂತಿದೆ. ಇದೀಗ ಅಪ್ರಾಪ್ತ ಬಾಲಕಿ ಮತ್ತು ಬಾಲಕ ಪರಾರಿಯಾಗಿದ್ದಾರೆ. ಗುವ್ವಲವಾರಪಲ್ಲಿ 20 ವರ್ಷ ಹುಡುಗನ ಜೊತೆ ಆಂಧ್ರಪ್ರದೇಶದ 15 ವರ್ಷದ ಅಪ್ರಾಪ್ತ ಬಾಲಕಿಯ ಜೊತೆ ಇಂದು ಬೆಳಗ್ಗೆ ಮದುವೆ ನಡೆಯುತ್ತಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ…

Read More