ಕರ್ನಾಟಕ ಸರ್ಕಾರ ಹಂಪಿ ಉತ್ಸವ ಆಚರಣೆ ಯಲ್ಲಿ ಮಲತಾಯಿ ಧೋರಣೆ—-ವಾಟಾಳ್ ನಾಗರಾಜ್

ಕರ್ನಾಟಕ ಸರ್ಕಾರ ಹಂಪಿ ಉತ್ಸವ ಆಚರಣೆಯಲ್ಲಿ ಮಲತಾಯಿ ಧೋರಣೆ ಯನ್ನ ತೋರಿಸುತ್ತದೆ ಎಂದು ಆರೋಪಿಸಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಹಂಪಿ ವಿರುಪಾಕ್ಷಿ ದೇವಾಲಯದ ಎದುರು ಉರುಳು ಸೇವೆ ಮಾಡಿ ವಿನೂತನ ಶೈಲಿಯಲ್ಲಿ ಧರಣಿ ನಡೆಸಿದರು….ಸರ್ಕಾರ ಹಂಪಿ ಉತ್ಸವವನ್ನು ಇಷ್ಟಬಂದಂತೆ ನಡೆಸಲು ಹೊರಟಿದೆ ಬಹುಶಃ ಸರ್ಕಾರಕ್ಕೆ ಹಂಪಿ ಮಹತ್ವ ಗೊತ್ತಿಲ್ಲಾ ಅನಿಸುತ್ತದೆ ಎಂದರು…..ಮೈಸೂರು ದಸರಾ ಉತ್ಸವಕ್ಕೆ ಸುಮಾರು‌ ಮೂರು ತಿಂಗಳು ಮುಂಚಿತವಾಗಿ ಸಿದ್ದತೆಗಳನ್ನು ಮಾಡುವ ನಮ್ಮ ರಾಜ್ಯ ಸರ್ಕಾರ ಹಂಪಿ ಉತ್ಸವ ವಿಷಯ ದಲ್ಲಿ ಮಾತ್ರ ಈರೀತಿ ಮಾಡುತ್ತಿರುವುದು ಸರಿ ಅಲ್ಲಾ ಅಂದರು….ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ಣಯ ವನ್ನು ತಗೆದು ಕೊಳ್ಳದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡಲು ನಾವು ಸಿದ್ದ ಎಂದು ಅವರು ಹೆಚ್ಚರಿಸಿದರು……

Please follow and like us:

Related posts

Leave a Comment