ಬೆಂಗಳೂರು: ನಾನು ರಾಜೀನಾಮೆಗೆ ಸಿದ್ಧ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ನಗರದಲ್ಲಿ 6 ಬೋಗಿಯ ಮೆಟ್ರೋ ರೈಲಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರೇ ತಮ್ಮ ಮುಖಂಡ ಎಂದು ಹೇಳುತ್ತಾರೆ, ಈ ಬಗ್ಗೆ ಏನು ಹೇಳುತ್ತೀರ ಎಂದು ಸಿಎಂಗೆ ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಅವರು, ಈ ವಿಚಾರಗಳನ್ನೆಲ್ಲಾ ಕಾಂಗ್ರೆಸ್ ನಾಯಕರೇ ನೋಡಿಕೊಳ್ಳಬೇಕು. ಇದು ನನಗೆ ಸಂಬಂಧವಿಲ್ಲ. ಅವರು ಇದನ್ನೇ ಮುಂದುವರೆಸುವುದಾದರೆ ನಾನು ನನ್ನ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರು ಮಿತಿ ಮೀರುತ್ತಿದ್ದಾರೆ. ಕೈ ನಾಯಕರು ತಮ್ಮ ಶಾಸಕರನ್ನು ಕಂಟ್ರೋಲ್ ಮಾಡಬೇಕು ಎಂದರು. ನನ್ನ ಕೆಲಸಗಳು ಸಕ್ಸಸ್ ಆಗಿಲ್ಲ ಅಂದ್ರೆ ರಾಜೀನಾಮೆ ನೀಡುತ್ತೇನೆ. ನಾನು ನನ್ನ ಸ್ಟೈಲ್ ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ನನ್ನ ಯೋಜನೆಗಳು ಯಶಸ್ವಿ ಆಗದಿದ್ರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದರು.
ನಾನು ರಾಜೀನಾಮೆ ನೀಡಲು ಸಿದ್ದ : ಮುಖ್ಯಮಂತ್ರಿ ಹೆಚ್ ಡಿಕೆ

Please follow and like us: