ಲಾಕ್‌ಡೌನ್ ನಡುವೆಯೂ ಲಂಚಾವತಾರ..

ಬೆಂಗಳೂರು: ಅತ್ತಿಬೆಲೆ ಚೆಕ್‌ಪೋಸ್ಟ್ ನಲ್ಲಿ ಕಳೆದ ರಾತ್ರಿ ಹಣ್ಣು ಮತ್ತು ತರಕಾರಿ ಸಾಗಣೆ ಮಾಡುತ್ತಿದ್ದ ವಾಹನ ಚಾಲಕರಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಇಬ್ಬರು ಬ್ರೇಕ್ ಇನ್ಸ್ಪೆಕ್ಟರ್‌ಗಳನ್ನು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅಮಾನತು ಮಾಡಿದ್ದಾರೆ,ಬ್ರೇಕ್ ಇನ್ಸ್ ಪೆಕ್ಟರ್‌ಗಳಾದ ಟಿ.ಕೆ. ಜಯಣ್ಣ ಹಾಗೂ ಕರಿಯಪ್ಪ ಅಮಾನತುಗೊಂಡವರು.ಇವರೊAದಿಗೆ ಶಾಮೀಲಾಗಿದ್ದ ಮಾಜಿ ಹೋಮ್ ಗಾರ್ಡ್ ವಿವೇಕ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಇನ್ನು ಕರಿಯಪ್ಪರಿಂದ ೧೨೫೦ ರೂ., ಜಯಣ್ಣರಿಂದ ೧೧೦೦ ರೂ.,ವಿವೇಕ್‌ರಿಂದ ೮೦೦ ರೂ. ಹಾಗೂ ಚೆಕ್‌ಪೋಸ್ಟ್ ಕಚೇರಿಯಲ್ಲಿ ೧೨೩೫೦ ರೂ. ವಶಪಡಿಸಿಕೊಳ್ಳಲಾಗಿದೆ ಅಂತ ಡಿಸಿ ಮಾಹಿತಿ ನೀಡಿದ್ದಾರೆ.

Please follow and like us:

Related posts

Leave a Comment