ಎಕ್ಸ್ ಪ್ರೆಸ್ ಟಿವಿ(ಜನತಾ ಟಿವಿ)ವರದಿಗಾರನ ಮೇಲೆ ಪೊಲೀಸ್ ದೌರ್ಜನ್ಯ

ತುಮಕೂರು: ಶಿರಾ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ನಮ್ಮ ಎಕ್ಸ್ ಪ್ರೆಸ್ ಟಿವಿ(ಜನತಾ ಟಿವಿ) ವರದಿಗಾರನ ಪೊಲೀಸ್ ಪೇದೆಯೊಬ್ಬರು ಅವಾಜ್ ಹಾಕಿ ಬೈಕ್ ಬೀಗ ಕಿತ್ತುಕೊಂಡ ಘಟನೆ ನಡೆದಿದೆ.
ಶ್ರೀಮಂತ್ ಕುಮಾರ್ ಪೊಲೀಸ್ ಪೇದೆ ದೌರ್ಜನ್ಯಕ್ಕೊಳಗಾದ ಎಕ್ಸ್ ಪ್ರೆಸ್ ಟಿವಿ(ಜನತಾ ಟಿವಿ) ವರದಿಗಾರ.

ಇಂದು ಬೆಳಿಗ್ಗೆ ಸುಮಾರು ೭.೪೦ ಸಮಯದಲ್ಲಿ ನಮ್ಮ ವರದಿಗಾರ ಶ್ರೀಮಂತ್ ಕುಮಾರ್ ಬಸ್ ಸ್ಟಾಂಡ್ ಬಳಿ ತೆರಳುತ್ತಿದ್ದಾಗ ಅಲ್ಲೇ ಕರ್ತವ್ಯ ನಿರತನಾಗಿದ್ದ ಪೊಲೀಸ್ ಪೇದೆ ರೋಹಿತ್ ಏಕಾಎಕಿ ಬೈಕ್ ಕೀಯನ್ನು ಕಿತ್ತುಕೊಂಡು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಯಾರಿಗೆ ಬೇಕಿದ್ದರು ಕಂಪ್ಲೇAಟ್ ಮಾಡಿಕೊಳ್ಳಿ ಎಂದು ನಿಂದಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಬಂದ ಇನೋರ್ವ ಪೊಲೀಸ್ ಅಧಿಕಾರಿಗೂ ಕೂಡ ಈ ಪೊಲೀಸ್ ಪೇದೆ ರೋಹಿತ್ ನಿಂದಿಸಿದ್ದಾರೆನ್ನಲಾಗಿದೆ.
ಇದೇ ವೇಳೆ ಎಕ್ಸ್ ಪ್ರೆಸ್ ಟಿವಿ(ಜನತಾ ಟಿವಿ) ತಂಡ ಘಟನೆ ಬಗ್ಗೆ ತುಮಕೂರು ಎಸ್ಪಿ ಅವರನ್ನು ಸಂಪರ್ಕಿಸಿದಾಗ,ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ ಕೊರೊನಾದಿಂದ ಕಂಗೆಟ್ಟಿರುವ ಶಿರಾ ತಾಲೂಕಿನಲ್ಲಿ ಎಲ್ಲರೂ ಸೇರಿ ಒಟ್ಟಿಗೆ ಕರ್ತವ್ಯ ನಿರ್ವಹಿಸಬೇಕಾಗಿರುವ ಮಧ್ಯೆಯೇ ಪೊಲೀಸ್ ಪೇದೆಯೊಬ್ಬ ಇಂತಹ ದೌರ್ಜನ್ಯ ಎಸಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದ್ದು,ಈ ಘಟನೆಯನ್ನು ಪತ್ರಕರ್ತರು ಬಲವಾಗಿ ಖಂಡಿಸಿದ್ದಾರೆ.

Please follow and like us:

Related posts

Leave a Comment