ಸಿಎಂ ಪರಿಹಾರ ನಿಧಿಗೆ ಸಿದ್ಧಗಂಗಾಮಠದಿ0ದ 50 ಲಕ್ಷ

ತುಮಕೂರು : ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಶ್ರೀ ಸಿದ್ದಗಂಗಾಮಠದಿ0ದ 25 ಲಕ್ಷ ರೂ ಹಾಗೂ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯಿ0ದ 25 ಲಕ್ಷ ರೂಗಳ ಡಿಡಿಗಳನ್ನು (ಒಟ್ಟು 50.ಲಕ್ಷ ರೂ) ಸಿದ್ಧಗಂಗಾಮಠದ ಶ್ರೀಸಿದ್ಧಲಿಂಗಸ್ವಾಮೀಜಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ  ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ. ಕೆ ರಾಕೇಶ್ ಕುಮಾರ್, ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಮತ್ತಿತರರು ಹಾಜರಿದ್ದರು.

Please follow and like us:

Related posts

Leave a Comment