ಉಚಿತ ಹಾಲು ವಿತರಣೆ, ಜನರ ನೂಕು ನುಗ್ಗಲು..!

ಬೆಂಗಳೂರು: ಉಚಿತ ಹಾಲು ವಿತರಣೆ ಮಾಡುವಂತೆ ಸಿಎಂ ಆದೇಶ ಕೊಟ್ಟ ಬೆನ್ನಲ್ಲೇ ಬೆಂಗಳೂರಿನ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಉಚಿತ ಹಾಲಿಗಾಗಿ ಮುಗಿಬಿದ್ದ ಘಟನೆ ಇಂದು ನಡೆದಿದೆ.
ಪಂತರಪಾಳ್ಯ, ಕಮಲನಗರ ಸೇರಿ ಬೆಂಗಳೂರಿನ ಹಲವು ಕಡೆ ಉಚಿತವಾಗಿ ವಿತರಿಸುವ ಹಾಲಿಗಾಗಿ ಜನರು ಗುಂಪು ಗುಂಪಾಗಿ ಕಿಲೋ ಮೀಟರ್‌ಗಟ್ಟಲೇ ಕ್ಯೂನಲ್ಲಿ ನಿಂತಿದ್ದಾರೆ. ಹಾಲು ಪಡೆಯಲು ಬಂದ ಜನರು ಮಾಸ್ಕ್ ಹಾಕಿಲ್ಲ, ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಹಾಲು ವಿತರಣೆಯನ್ನ ಬಂದ್ ಮಾಡಿದ್ದಾರೆ.
ಅಲ್ಲದೇ ಜನಸಂದಣಿಯನ್ನ ಕಂಟ್ರೋಲ್ ಮಾಡಲು ಹೊಯ್ಸಳ ವಾಹನದ ಮೂಲಕ ಪೊಲೀಸರು ಜನರನ್ನು ಚದುರಿಸುತವಂತಾಯಿತು. ಟಿ.ದಾಸರಹಳ್ಳಿಯ ಮೆಟ್ರೋ ನಿಲ್ದಾಣದ ಬಳಿ ಉಚಿತ ಹಾಲಿಗಾಗಿ ಬೆಳಗಿನ ಜಾವ ೬ ಗಂಟೆಯಿAದಲೇ ಸ್ಥಳೀಯರು ಸಾಲುಗಟ್ಟಿ ನಿಂತಿದ್ದಾರೆ.
ಮೈಸೂರು ರಸ್ತೆಯ ಪಂತರಪಾಳ್ಯದಲ್ಲೂ ಕೂಡ ಹಾಲಿನ ವಾಹನಕ್ಕೆ ಜನರು ಮುಗಿಬಿದ್ದಿದ್ದಾರೆ.ಹಾಲಿನ ವಾಹನ ಬರುವುದನ್ನು ಕಂಡ ಜನರು ವಾಹನದ ಹಿಂದೆಯೇ ಓಡೋಡಿ ಬಂದಿದ್ದಾರೆ.ಈ ನೂಕು ನುಗ್ಗಲಿನಲ್ಲಿ ನೂರಾರು ಪ್ಯಾಕೆಟ್ ಹಾಲು ಮಣ್ಣು ಪಾಲಾಗಿದ್ದು,ಸಿಬ್ಬಂದಿ ರಸ್ತೆಯುದ್ದಕ್ಕೂ ಹಾಲಿನ ಪ್ಯಾಕೆಟ್‌ಗಳನ್ನು ಚೆಲ್ಲಿದ್ದಾರೆ. ಕೈಗೆ ಸಿಕ್ಕಷ್ಟು ಹಾಲಿನ ಪ್ಯಾಕೆಟ್‌ಗಳನ್ನು ಜನರು ತೆಗೆದುಕೊಂಡು ಹೋಗಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ ಚಿತ್ರದುರ್ಗ, ಹಾಸನ ಜಿಲ್ಲೆಯಲ್ಲೂ ಉಚಿತ ಹಾಲಿಗಾಗಿ ಕಿ.ಮೀ.ಗಟ್ಟಲೇ ಜನರು ಸಾಲಾಗಿ ನಿಂತಿದ್ದರು. ಹೊಳೆನರಸೀಪುರದಲ್ಲಿ ಮಾಜಿ ಸಚಿವ ರೇವಣ್ಣ ಜನರಿಗೆ ಉಚಿತವಾಗಿ ಹಾಲು ವಿತರಣೆ ಮಾಡಿದ್ದಾರೆ.

Please follow and like us:

Related posts

Leave a Comment