ಬೆಂಗಳೂರು ಪೊಲೀಸರ ವಿರುದ್ಧ ಸಹಕಾರ ಸಚಿವ ಗರಂ

ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬೆಂಗಳೂರು ಪೊಲೀಸರ ವಿರುದ್ಧ ಗರಂ ಆದ ಘಟನೆ ಇಂದು ನಡೆದಿದೆ.
ಬೆಳಿಗ್ಗೆ ಬೆಂಗಳೂರಿನ ಸಿಂಗೇನಹಳ್ಳಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರ ಜೊತೆ ಸಚಿವ ಸೋಮಶೇಖರ್ ಚರ್ಚೆ ನಡೆಸಿದರು.
ಈ ವೇಳೆ ಗಾಡಿಗಳನ್ನು ಡೈವರ್ಟ್ ಮಾಡೋ ನೆಪದಲ್ಲಿ ಪೊಲೀಸರು ಸುಖಾಸುಮ್ಮನೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆಂದು ಹಲವು ರೈತರು ಸೋಮಶೇಖರ್ ಬಳಿ ಅಳಲು ತೋಡಿಕೊಂಡರು.
ತಕ್ಷಣ ಸ್ಥಳದಲ್ಲೇ ಡಿಜಿಪಿ & ಐಜಿ ಪ್ರವೀಣ್ ಸೂದ್‌ಗೆ ಕರೆ ಮಾಡಿದ ಸಚಿವ ಸೋಮಶೇಖರ್`ರೈತರಿಗೆ ಪೊಲೀಸರು ತೊಂದರೇ ಕೊಡ್ತಿದ್ದಾರಂತೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗರಂ ಆದರು. ಬಳಿಕ ರೈತರಿಗೆ ಸಮಾಧಾನ ಹೇಳಿ ಮುಂದೆ ಇಂತಹ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.

Please follow and like us:

Related posts

Leave a Comment