ಆನೇಕಲ್: ಇಂಟರ್ನೆಟ್ ಪ್ರೊವೈಡರ್ ಅಂಡ್ ಗ್ಯಾಂಗ್ ಪಿಜಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೋವಿಂದ ಶೆಟ್ಟಿ ಪಾಳ್ಯದಲ್ಲಿರಯವ ಕ್ವೀನ್ಸ್ ಲಾಂಜ್ ಪಿಜಿ ಬಳಿ ನಡೆದಿದೆ.
ಅಂದ ಹಾಗೇ ಕಳೆದ ಕೆಲವು ದಿನಗಳಿಂದ ಪಿಜಿ ಇಂಟರ್ನೆಟ್ ಸಂಪರ್ಕ ಹಾಕಿಸಿಕೊಳ್ಳುವಂತೆ ಇಂಟರ್ ನೆಟ್ ಪ್ರೊವೈಡರ್ ಮಾಲೀಕ ಶೇಖರ್ ಪಿಜಿಯವರ ಬಳಿ ಕೇಳುತ್ತಿದ್ದ.ಆದರೆ ಇಂಟರ್ನೆಟ್ ಹಾಕಿಸಿಕೊಳ್ಳಲು ನಿರಾಕರಣೆ ಮಾಡಿದ ಹಿನ್ನೆಲೆ ಪಿಜಿ ಸಿಬ್ಬಂದಿ ಶ್ರೀನಿವಾಸ್‌ನನ್ನು ಶೇಖರ್ ಥಳಿಸಿದ್ದಾರೆ.
ಇನ್ನು ತಡರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಿಯರ್ ಬಾಟಲ್ ಜೊತೆಗೆ ಗ್ಯಾಂಗ್‌ನ್ನ ಕರೆತಂದ ಶೇಖರ್ ಪಿಜಿ ಸಿಬ್ಬಂದಿ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆಗೆ ಯತ್ನಿಸಿ ಪಿಜಿ ಕಚೇರಿಯ ಮುಂಭಾಗದ ಗ್ಲಾಸ್‌ನ್ನು ಪುಡಿಗೊಳಿಸಿ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿದ್ದಾರೆ.
ಸದ್ಯ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಪಿಜಿ ಮುಂಭಾಗದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬAಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಿಜಿ ಸಿಬ್ಬಂದಿ ಮೇಲೆ ಇಂಟರ್ನೆಟ್ ಪ್ರೊವೈಡರ್ ಅಂಡ್ ಗ್ಯಾಂಗ್ ಹಲ್ಲೆ

Please follow and like us: