ಶಿರಾ ಪೊಲೀಸರಿಂದ ಪಥಸಂಚಲನ

ಶಿರಾ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಧರ್ಮೀಯರು ಸಹಕರಿಸುವಂತೆ ಕೋರಲು ಶಿರಾ ನಗರ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಶಿರಾ ಡಿವೈಎಸ್ಪಿ ಕುಮಾರಪ್ಪ, ವೃತ್ತ ನಿರೀಕ್ಷಕ ಶಿವಕುಮಾರ್.ಪಿಎಸ್‌ಐಗಳಾದ ಸಿದ್ಧಾರ್ಥ್,ಭಾರತಿ ಸೇರಿದಂತೆ ಕೆಎಸ್‌ಆರ್‌ಪಿ, ಹೈವೆ,ಮೊಬೈಲ್ ಪೊಲೀಸರು ಸೇರಿದಂತೆ ೨೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಇನ್ನು ಸಭೆಯಲ್ಲಿ ಮಾತನಾಡಿದ ಶಿರಾ ಡಿವೈಎಸ್ಪಿ ಕುಮಾರಪ್ಪ, ಪ್ರಮುಖವಾಗಿ ಸಾಮಾಜಿಕ ಅಂತರ ಪಾಲಿಸದಿದ್ದರೇ ಹಾಗೂ ಸಾಮಾಜಿಕ ಜಾಲಗಳಲ್ಲಿ ಅನಗತ್ಯ ವಿಡಿಯೋಗಳನ್ನು ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಡೆಸುತ್ತಿರುವವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುತ್ತದೆ.
ಇದೇ ವೇಳೆ ಡಿವೈಎಸ್ಪಿ ಕುಮಾರಪ್ಪ ನೇತೃತ್ವದಲ್ಲಿ ಶಿರಾ ನಗರದ ಮಲ್ಲಿಕ್ ರೆಹಾನ್ ದರ್ಗಾ ಮುಂಭಾಗದಿAದ ಆರಂಭವಾದ ಪಥಸಂಚಲನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು.

ಶ್ರೀಮ0ತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment