ರೇಷನ್ ಕಿಟ್ ವಿತರಣೆ ಮಾಡಿದ ರಾಮುಲು

ಬಳ್ಳಾರಿ: ಕೋವಿಡ್-೧೯ ವೈರಸ್ ಎದುರಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ, ಅಂದಿನಿAದ ಬಡ- ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಹೀಗಾಗಿ, ಬಡವರ ಹಸಿವು ನೀಗಿಸಲು ದಾನಿಗಳು ಮುಂದಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮನವಿ ಮಾಡಿದ್ದಾರೆ.
ನಗರದ ಕಪ್ಪಗಲ್ಲು ರಸ್ತೆಯಲ್ಲಿರುವ ಬದ್ರಿನಾರಾಯಣ ದೇಗುಲ ಬಳಿ ಕಡುಬಡವರಿಗೆ ಮತ್ತು ಬಡತನದ ರೇಖೆಗಿಂತ ಕೆಳಗಿನವರಿಗೆ ನಿತ್ಯ ಬಳಕೆಯ ೫ ಕೆಜಿ ಅಕ್ಕಿ,೫ ಕೆಜಿ ಬೇಳೆ,೧ ಕೆಜಿ ರವೆ,ಎಣ್ಣೆ ಇರುವ ಆಹಾರ ಕಿಟ್‌ಗಳನ್ನ ವಿತರಣೆ ಮಾಡಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಂಡಿದೆ.ಹಾಗೇ ಯಾರೋಬ್ಬರು ಹಸಿವಿನಿಂದ ಇರಬಾರದು ಎಂಬ ಉದ್ದೇಶ ನಮ್ಮ ಸರ್ಕಾರದ್ದಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ನಗರ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.

ಯು.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Please follow and like us:

Related posts

Leave a Comment