ಕೋಲಾರದಲ್ಲಿ ಸೋಂಕು ನಿವಾರಣೆ ಸುರಂಗ ಮಾರ್ಗ

ಕೋಲಾರ: ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಕೋಲಾರದಲ್ಲಿ ಮೊದಲ ಸೋಂಕು ನಿವಾರಣಾ ಔಷದಿ ಸಿಂಪಡಣಾ ಸುರಂಗ ಮಾರ್ಗವನ್ನು ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡಿದರು.
ಕೋಲಾರದ ಮಡೇರಹಳ್ಳಿ ಬಳಿ ಇರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಔಷದಿ ಸಿಂಪಡಣಾ ಸುರಂಗ ಮಾರ್ಗವನ್ನು ಉದ್ಘಟನೆ ಮಾಡಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸೋಂಕು ಕಂಡುಬರದೇ ಇರುವುದು ಹೆಮ್ಮೆಯ ವಿಚಾರ.ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ,ಜಿಲ್ಲಾಡಳಿ ಹಾಗೂ ವೈದ್ಯರು ಅವಿರವಾಗಿ ಶ್ರಮಿಸುತ್ತಿದ್ದು,ಸಾರ್ವಜನಿಕರು ಅನವಶ್ಯಕವಾಗಿ ಓಡಾಡದಂತೆ ಮನವಿ ಮಾಡಿದರು.
ನಗರದ ಪ್ರದೇಶದಲ್ಲಿ ಅನವಶ್ಯಕವಾಗಿ ಸಾರ್ವಜನಿಕರು ಓಡಾಡುತ್ತಿದ್ದು,ಅಂತವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರಲ್ಲದೆ,ಮೋದಿಯವರ ಆಶಯದಂತೆ ದೇಶದಂದ ಹೆಮ್ಮಾರಿ ಕೊರೊನಾವನ್ನು ಓಡಿಸಬೇಕಾಗಿದೆ. ಹೀಗಾಗಿ ಸಾರ್ವಜನಿಕರು ಮನೆಯಲ್ಲೇ ಇದ್ದು ಪೊಲೀಸ್ ಇಲಾಖೆಯೋಂದಿಗೆ ಸಹಕಾರ ನೀಡಬೇಕು ಎಂದರು
ಶಾಸಕ ಶ್ರೀನಿವಾಸ ಗೌಡ ಮಾತನಾಡಿ,ಕೊರೊನಾ ವೈರಾಣು ಉಂಟುಮಾಡಿರುವ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ಸಮಾಜದ ಎಲ್ಲ ವರ್ಗದ ಜನರೂ ಸಹಕರಿಸಬೇಕು.ಗುಂಪಾಗಿ ಓಡಾಡುವುದನ್ನು ನಿಲ್ಲಿಸಬೇಕು.ಆರೋಗ್ಯ ಇಲಾಖೆ ಮಾಡಿರುವ ಸಲಹೆ ಹಾಗೂ ಸೂಚನೆಗಳನ್ನು ತಪ್ಪದೆ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರು ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಮಕ್ಕಳು ಮತ್ತು ವಯಸ್ಸಾದವರನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳವ ಮೂಲಕ ಕೊರೊನಾ ವೈರಸ್ ತಡೆಗೆ ಮುಂದಾಗಬೇಕು ಎಂದು ಹೇಳಿದರು.
ಈ ಸಂಸರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ ಡಿ.ಎಲ್.ನಾಗರಾಜ್, ತಾಲ್ಲೂಕು ದಂಡಾಧಿಕಾರಿ ಶೋಭಿತಾ, ನಗರಸಭೆ ಆಯುಕ್ತ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು .

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment