ಕೊರೊನಾ ಎಫೆಕ್ಟ್: ಶೇ. 30ರಷ್ಟು ವೇತನ ಕಡಿತ?

ಬೆಂಗಳೂರು: ಶಾಸಕರ ವೇತನದಲ್ಲಿ ಶೇ. ೩೦ರಷ್ಟು ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಸದ್ಯ ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿದರು.
ಚರ್ಚೆ ವೇಳೆ ಎಲ್ಲಾ ಶಾಸಕರ, ಪ್ರತಿಪಕ್ಷದ ನಾಯಕರ, ಪರಿಷತ್ ಸದಸ್ಯರ ಶೇ. ೩೦ರಷ್ಟು ವೇತನ ಕಡಿತ ಮಾಡುವ ಕುರಿತು ಮಾತುಕತೆ ನಡೆಸಿದರು.
ಇನ್ನು ಕೊರೊನಾ ಹಿನ್ನೆಲೆಯಲ್ಲಿ ಬರಬೇಕಾದ ತೆರಿಗೆ ಸಂಪೂರ್ಣ ನಿಂತಿದ್ದು,ಸರ್ಕಾರಕ್ಕೆ ಆರ್ಥಿಕ ತೊಂದರೆಯಾಗುತ್ತಿದೆ.ಹೀಗಾಗಿ ಜನಪ್ರತಿನಿಧಿಗಳ ವೇತನ ಕಡಿತದ ಬಗ್ಗೆ ಸಿಎಂ ಪ್ರಸ್ತಾಪಿಸಿದ ವೇಳೆ ಇದಕ್ಕೆ ಪ್ರತಿಪಕ್ಷದ ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆನ್ನಲಾಗಿದೆ.
ಹೀಗಾಗಿ ಸಿಎಂ ಶಾಸಕರ ವೇತನ ಕಡಿತದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಇದೇ ವೇಳೆ ಯಾವುದೇ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರ ವೇತನ ಕಡಿತ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment