ಮತ್ತೆ 14,500 ಬಡ ಕುಟುಂಬಗಳಿಗೆ ದಿನಸಿ ವಿತರಣೆ

ಮಹದೇವಪುರ(ಬೆಂಗಳೂರು):ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ೧೩,೫೦೦ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿವರಿಸಲಾಗಿದೆ ಎಂದು ಶಾಸಕ ಅರವಿಂದ ಲಿಂಬಾವಲಿ ತಿಳಿಸಿದ್ದಾರೆ.
ಎರಡನೇ ಹಂತವಾಗಿ ೧೪,೫೦೦ ಬಡ ಕುಟುಂಬಗಳಿಗೆ ವಿತರಿಸುವ ಕಾರ್ಯ ಪ್ರಾರಂಭವಾಗಿದ್ದು,ಬಿಬಿಎAಪಿ ಹಾಗೂ ಗ್ರಾಮಾಂತರ ಭಾಗದ ಕಟ್ಟಡ ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇಂದು ಸಹ ಕ್ಷೇತ್ರದ ಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿಗಳಾದ ಕಣ್ಣೂರು, ದೊಡ್ಡ ಗುಬ್ಬಿ, ಈಸ್ಟ್ ಪಾಯಿಂಟ್ ಕಾಲೇಜು ಸಮೀಪದ ಹಿರಂಡಹಳ್ಳಿ, ಬೊಮ್ಮೇನಹಳ್ಳಿ ಗ್ರಾಮದ ದಿನಕೂಲಿ ನೌಕರರಿಗೆ, ಚಾಲಕರಿಗೆ, ಆಶ್ರಮಗಳಿಗೆ, ಪಿಜಿಗಳಿಗೆ ಮುಂತಾದವುಗಳ ಭಾಗದಲ್ಲಿ ಅಧಿಕಾರಿಗಳೊಂದಿಗೆ ದಿನಸಿ ಸಾಮಗ್ರಿಗಳನ್ನು ನೀಡಿ ಜನರ ಯೋಗಕ್ಷೇಮವನ್ನು ವಿಚಾರಿಸಿದರು.
ಒಂದು ಕುಟುಂಬಕ್ಕೆ ೫ ಕೆ.ಜಿ ಅಕ್ಕಿ,೧ ಕೆ.ಜಿ ಗೋಧಿಹಿಟ್ಟು,೧/೨ ಲೀ.ಅಡುಗೆ ಎಣ್ಣೆ, ೧ ಕೆ.ಜಿ. ಆಲೂಗಡ್ಡೆ, ೨ ನಿಂಬೇಹಣ್ಣು,೨ ಮಂಗಳೂರು ಸೌತೇಕಾಯಿ, ೧೦೦ ಗ್ರಾಂ ಶುಂಟಿ, ೨೦೦ ಗ್ರಾಂ ಉಪ್ಪಿನಕಾಯಿ, ೧೦೦ ಗ್ರಾಂ ಅರಿಸಿನ, ೧೦೦ ಗ್ರಾಂ ಸಾಂಬಾರ್ ಪುಡಿ, ೧೦೦ ಗ್ರಾಂ ರಸಂ ಪೌಡರ್, ೧ ಕೆ.ಜಿ. ತೊಗರಿಬೇಳೆ, ೧/೪ ಕೆ.ಜಿ ಅಳಸಂಡಿ ಕಾಳು, ೨.೫ ಕೆ.ಜಿ ಸಕ್ಕರೆ, ೧ ಕೆ.ಜಿ ಈರುಳ್ಳಿ ಗಳನ್ನು ವಿವರಿಸಲಾಗಿದೆ ಹಾಗೂ ಅವಶ್ಯಕತೆಗನುಗುಣವಾಗಿ ಮುಂದಿನ ದಿನಗಳಲ್ಲಿ ಪುನಃ ವಿತರಿಸಲಾಗುವುದು ಎಂದರು.
ಈ ವೇಳೆ ಪೂರ್ವ ತಾಲ್ಲೂಕು ತಹಶೀಲ್ದಾರ್ ತೇಜಸ್ ಕುಮಾರ್, ಇಓ ಮಂಜುನಾಥ್,ಮುಖAಡರಾದ ನಟರಾಜ್,ಅದೂರು ಮುನಿರಾಜ್, ಜೋತಿಪುರ ವೇಣು, ಧನಂಜಯ ಮುಂತಾದವರು ಹಾಜರಿದ್ದರು.

ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆAಗಳೂರು)

Please follow and like us:

Related posts

Leave a Comment