ಬೇಕರಿ ಐಟಂಗೆ ಬೀಚಿಂಗ್ ಪೌಡರ್ ಸಿಂಪಡಿಸಿದ್ದೇಕೆ?

ಅರಕಲಗೂಡು: ಜಿಲ್ಲಾಧಿಕಾರಿ ಆದೇಶದಂತೆ ಅರಕಲಗೂಡು ತಹಶೀಲ್ದಾರ್ ರೇಣುಕುಮಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ಬೇಕರಿ ಮಾಲೀಕರ ಸಭೆ ನಡೆಯಿತು.
ಸಭೆಯಲ್ಲಿ ನಾಳೆಯಿಂದ ಹೊಸ ಶುಚಿ ರುಚಿಯ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಲು ಹಾಗೂ ಸಾಮಾಜಿಕ ಅಂತರ ಕಾಪಾಡಲು ಬೇಕರಿ ಮಾಲೀಕರಿಗೆ ಸಲಹೆ ಸೂಚನೆ ನೀಡಲಾಯಿತು.
ಇನ್ನು ಡಿಸಿಯವರ ಆದೇಶದ ಮೇರೆಗೆ ನಾಳೆಯಿಂದ ಹಾಸನ ಜಿಲ್ಲೆಯಲ್ಲಿ ಎಲ್ಲಾ ಬೇಕರಿಗಳು ಬೆಳ್ಳಿಗ್ಗೆ ೮ ರಿಂದ ೧೨ ಗಂಟೆಯವರೆಗೆ ತೆರೆದು ವ್ಯಾಪಾರ ವಹಿವಾಟು ನಡೆಸಬಹುದು ಎಂದು ತಹಶೀಲ್ದಾರ್ ರೇಣುಕುಮಾರ್ ತಿಳಿಸಿದರು.
ಇದೇ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬುರ ಆದೇಶದ ಮೇರೆಗೆ ಆರೋಗ್ಯ ಅಧಿಕಾರಿ ಲಿಂಗರಾಜು ಮತ್ತು ಪೌರ ಕಾರ್ಮಿಕ ತಂಡ ಪಟ್ಟಣದಲ್ಲಿರುವ ಎಲ್ಲಾ ಬೇಕರಿಗಳಿಗೆ ಭೇಟಿ ನೀಡಿತು.
ಈ ವೇಳೆ ಹಳೆಯ ಎಲ್ಲಾ ಬಗೆಯ ಸಿಹಿ ತಿಂಡಿ ತಿನಿಸುಗಳನ್ನು ವಶಕ್ಕೆ ಪಡೆದು ಬೀಚಿಂಗ್ ಪೌಡರ್‌ನ್ನು ಸಿಂಪಡಿಸಿತು.

ಎ.ಎಸ್ ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment