ಸರ್ಕಾರಿ ನೌಕರರಿಗೆ,ಪೊಲೀಸರಿಗೆ ಇಲ್ಲಿ ನಿತ್ಯವೂ ದಾಸೋಹ..

ಶಿರಾ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಸರ್ಕಾರಿ ನೌಕರರಿಗೆ ಮತ್ತು ಹಸಿದವರಿಗೆ ಶಿರಾ ನಗರದಲ್ಲಿ ಡಾ.ರಾಜೇಶ್ ಗೌಡ ಗೆಳೆಯರ ಬಳಗ ತಂಡ ನಿತ್ಯವೂ ಆಹಾರ ಪೂರೈಸುವ ಕೆಲಸದಲ್ಲಿ ನಿರತವಾಗಿದೆ.
ಸದ್ಯ ಕಳೆದ ೩ ದಿನಗಳಿಂದ ನಿತ್ಯವೂ ಪೊಲೀಸರಿಗೆ, ಪೌರ ಕಾರ್ಮಿಕರು,ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಲ ಸರ್ಕಾರಿ ನೌಕರರಿಗೆ ಊಟದ ವ್ಯವಸ್ಥೆ ಮಾಡುತ್ತಾ ಬರುತ್ತಿದ್ದಾರೆ.
ಇನ್ನು ನಿತ್ಯವೂ ಆಹಾರ ಪ್ಯಾಕೆಟ್‌ಗಳನ್ನ ರೆಡಿ ಮಾಡಿ ಹೊರ ರಾಜ್ಯದಿಂದ ಇಲ್ಲಿಗೆ ಬಂದಿರುವ ಕುಟುಂಬಗಳಿಗೂ ಸಹ ಈ ತಂಡ ವಿತರಿಸುತ್ತಿದೆ.ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ (ತುಮಕೂರು)

Please follow and like us:

Related posts

Leave a Comment