ಒಂದೇ ದಿನ 10 ಪಾಸಿಟಿವ್.. ಸೋಂಕಿತರು 191..

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಗಳು ಮತ್ತಷ್ಟು ಏರಿಕೆ ಕಂಡಿದೆ. ಗುರುವಾರ ೧೦ ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೧೯೧ಕ್ಕೆ ಏರಿಕೆಯಾಗಿದೆ.
ಇಂದು ಮಂಡ್ಯದಲ್ಲಿ ೧, ಬೆಳಗಾವಿಯಲ್ಲಿ ೧, ಚಿಕ್ಕಬಳ್ಳಾಪುರದಲ್ಲಿ ೧, ಬಾಗಲಕೋಟೆಯಲ್ಲಿ ೩, ಬೆಂಗಳೂರಿನಲ್ಲಿ ೨, ನಂಜನಗೂಡಿನಲ್ಲಿ ಎರಡು ಪ್ರಕರಣಗಳು ಪಾಸಿಟಿವ್ ಬಂದಿದೆ.
೧೦ ಪಾಸಿಟಿವ್ ಪ್ರಕರಣದಲ್ಲಿ ಮೂರು ಪ್ರಕರಣಗಳು ತಬ್ಲಿಘಿ ಜೊತೆಗೆ ಲಿಂಕ್ ಹೊಂದಿದ್ರೆ, ಮೂರು ಪ್ರಕರಣಗಳು ಜ್ಯುಬಿಲಿಯೆಂಟ್ ಕಾರ್ಖಾನೆಯೊಂದಿಗೆ ನಂಟು ಹೊಂದಿದೆ.
ಇನ್ನು ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ರೋಗಿ ಸಂಖ್ಯೆ ೧೬೬ ಆಗಿದ್ದ ಗದಗ್‌ನ ೮೦ ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ೬ಕ್ಕೆ ಏರಿಕೆಯಾಗಿದೆ.
೨೮ ಮಂದಿ ಸೋಂಕಿನಿAದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೊಸದಾಗಿ ೧೦ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ ೧೯೧ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment