ಪಡಿತರಕ್ಕೆ ಹಣ ಪಡೆದ್ರೆ ಅಷ್ಟೆ..ಸುಮ್ಮನಿರಲ್ಲ..

ನೆಲಮಂಗಲ:ತಾಲ್ಲೂಕಿನ ವಿವಿಧ ಪಡಿತರ ಅಂಗಡಿಗಳಿಗೆ ಮತ್ತು ಟಿಎಪಿಎಂಸಿ ಉಗ್ರಾಣಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಭೇಟಿ ಪರಿಶೀಲನೆ ನಡೆಸಿದರು.
ಸರ್ಕಾರ ಪಡಿತರವನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ.ಆದರೆ ಕೆಲವರು ಪಡಿತರರಿಂದ ಹಣ ಪಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆ ಸಚಿವರು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಆಹಾರದ ಗುಣಮಟ್ಟವನ್ನ ಪರಿಶೀಲನೆ ನಡೆಸಿದರು. ಅಲ್ಲದೆ, ಕೊರೊನಾ ವೈರಸ್ ಹಿನ್ನೆಲೆ ಪಡಿತರ ವಿತರಣೆ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಸರದಿ ಸಾಲಿನಲ್ಲಿ ನಿಂತು ನೂರಕ್ಕೂ ಹೆಚ್ಚು ಜನ ನಿಲ್ಲದಂತೆ ಎಚ್ಚರಿಕೆ ವಹಿಸುವಂತೆ ಪಡಿತರ ವಿತರಕರಿಗೆ ಹೇಳಿದರು. ಒಟಿಪಿ ಪಡೆಯದೆ ಪಡಿತರ ವಿತರಣೆ ಮಾಡಿ, ನಿಯಮ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.

ಕೆ.ಕಿರಣ್ ಎಕ್ಸ್ ಪ್ರೆಸ್ ಟಿವಿ ನೆಲಮಂಗಲ

Please follow and like us:

Related posts

Leave a Comment