ದೇವದುರ್ಗದಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ

ದೇವದುರ್ಗ: ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ತಾಲೂಕಿನ ಚಿನ್ನಾನಾಯಕ ತಾಂಡದಲ್ಲಿ ನಡೆದಿದೆ.
ಅಂದ ಹಾಗೇ ಪಿಎಸ್‌ಐ ಎಲ್.ಬಿ.ಅಗ್ನಿ ನೇತೃತ್ವದ ಪೊಲೀಸರ ತಂಡ, ತಾಂಡದಲ್ಲಿ ಕಳ್ಳಭಟ್ಟಿ ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆ ದಾಳಿ ನಡೆಸಿ ೭೦ ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ೫೦೦ ರೂಪಾಯಿ ನಗದನ್ನು ವಶಪಡಿಸಿಕೊಂಡು ನೇಮನಾಯ್ಕ ಎಂಬಾತ ಸೇರಿ ೧೨ ಮಂದಿಯನ್ನು ಬಂಧಿಸಿದೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ (ರಾಯಚೂರು)

Please follow and like us:

Related posts

Leave a Comment